ಭಾರತದಲ್ಲಿ ಈಗಲೂ ಅಸ್ತಿತ್ವದಲ್ಲಿವರ ಅನಿಷ್ಠ ವಾಮಾಚಾರ : ಮನುಷ್ಯ ದೇಹತ್ಯಾಗ ಪ್ರಕರಣಗಳು.

ಕೇರಳ, ಅಕ್ಟೋಬರ್ 20, 2022 (www.justkannada.in): ಕಳೆದ ಕೆಲವು ದಿನಗಳಿಂದ ನೆರೆಯ ಕೇರಳ ರಾಜ್ಯದಲ್ಲಿ ಮಾನವ ದೇಹ ತ್ಯಾಗದ ಪ್ರಕರಣಗಳ ಕುರಿತು ವ್ಯಾಪಕ ಟೀಕೆ ಹಾಗೂ ಚರ್ಚೆಗಳಾಗುತ್ತಿವೆ. ಇತ್ತೀಚಿಗೆ, “ಧಾರ್ಮಿಕ ಮಾನವ ತ್ಯಾಗ” ಪ್ರಕರಣ ಎಂದು ಅನುಮಾನಿಸಿರುವ ಪ್ರಕರಣವೊಂದರಲ್ಲಿ ಸುಮಾರು 50ರ ದಶಕದಲ್ಲಿರುವ ವಯಸ್ಸಿನ ಇಬ್ಬರು ಮಹಿಳೆಯರನ್ನು ಕುಟುಂಬಸ್ಥರಿಂದ ಬೇರ್ಪಡಿಸಿ ಜೀವಂತವಾಗಿ ಹೂಳಲಾಯಿತು. ಭಗವಲ್ ಸಿಂಗ್ ಎಂಬ ಹೆಸರಿನ ಸಾಂಪ್ರದಾಯಿಕ ವೈದ್ಯ ಮತ್ತು ಆತನ ಮಡದಿ ಲೈಲ ಎಂಬುವವರೇ ಈ ವಾಮಾಚಾರ ಪ್ರಕರಣದ ಆರೋಪಿಗಳಾಗಿದ್ದಾರೆ. ಇವರ ಜೊತೆಗೆ, ವಾಮಾಚಾರ ಹಾಗೂ ಸಂತ್ರಸ್ತರ ತಲೆಕೆಡಿಸಿ ಇದಕ್ಕೆ ಒಪ್ಪಿಸಿದ ಆರೋಪದ ಮೇರೆಗೆ ಮೊಹಮ್ಮದ್ ಶಫಿ, ಅಲಿಯಾಸ್ ರಶೀದ್ ಎಂಬುವನನ್ನೂ ಸಹ ಪೋಲಿಸರು ಬಂಧಿಸಿದ್ದಾರೆ.

ಅಷ್ಟು ಸಾಮಾನ್ಯ ಅಲ್ಲದಿದ್ದರೂ ಸಹ ಮನುಷ್ಯನ ದೇಹ ತ್ಯಾಗ (ವಾಮಾಚಾರದ ಹೆಸರಿನಲ್ಲಿ) ಭಾರತದಲ್ಲಿ ಇನ್ನೂ ಜೀವಂತವಾಗಿದೆ. ನ್ಯಾಷನಲ್ ಕ್ರೈಂ  ರೆಕಾರ್ಡ್ಸ್ ಬ್ಯೂರೊ (ಎನ್‌ಸಿಆರ್‌ಬಿ) ದತ್ತಾಂಶದ ಪ್ರಕಾರ, ೨೦೧೪ ರಿಂದ ೨೦೨೧ರ ನಡುವೆ ಭಾರತದಲ್ಲಿ ೧೦೩ ಈ ರೀತಿಯ ಧಾರ್ಮಿಕ ತ್ಯಾಗಗಳ ಪ್ರಕರಣಗಳು ದಾಖಲಾಗಿವೆ. ೨೦೧೫ರಲ್ಲಿ ಇಂತಹ ಅತಿ ಹೆಚ್ಚಿನ ಅಂದರೆ ೨೪ ಪ್ರಕರಣಗಳು ದಾಖಲಾಗಿದ್ದರೆ, ೨೦೧೮ರಲ್ಲಿ ಅತೀ ಕಡಿಮೆ ೪ ಪ್ರಕರಣಗಳು ದಾಖಲಾಗಿವೆ. ಸರ್ಕಾರಿ ದತ್ತಾಂಶಗಳ ಪ್ರಕಾರ ೨೦೨೧ರಲ್ಲಿ ಆರು ಮನುಷ್ಯ ತ್ಯಾಗಗಳ ಪ್ರಕರಣಗಳು ನಡೆದಿವೆ.

ಇದೇ ಅವಧಿಯಲ್ಲಿ ಒಟ್ಟು 14 ಪ್ರಕರಣಗಳೊಂದಿಗೆ ಛತ್ತೀಸ್‌ ಘಡ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರೆ, ಕರ್ನಾಟಕದಲ್ಲಿ ಇಂತಹ ೧೩ ಪ್ರಕರಣಗಳು ಜರುಗಿದ್ದು ಎರಡನೆಯ ಸ್ಥಾನದಲ್ಲಿದೆ. ಜಾರ್ಖಂಡ್ ೧೧ ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಛತ್ತೀಸ್‌ ಘಡದಲ್ಲಿ ೨೦೨೦ರಲ್ಲಿ ಒಟ್ಟು ೯ ಪ್ರಕರಣಗಳು ನಡೆದಿದ್ದರೆ, ಕರ್ನಾಟಕದಲ್ಲಿ ಇಂತಹ ಪ್ರಕರಣಗಳ ಅತೀ ಹೆಚ್ಚಿನ ಸಂಖ್ಯೆ ೫ ಪ್ರಕರಣಗಳು ೨೦೧೭ರಲ್ಲಿ ನಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.

೨೦೨೧ರ ದತ್ತಾಂಶವನ್ನು ನೋಡುವುದಾದರೆ ಛತ್ತೀಸ್‌ ಘಡದಲ್ಲಿ ಒಟ್ಟು ೬ ಪ್ರಕರಣಗಳ ಜರುಗಿದ್ದು, ಹಿಮಾಚಲ ಪ್ರದೇಶ, ತೆಲಂಗಾಣ ಹಾಗೂ ಜಮ್ಮು ಮತ್ತು ಕಾಶ್ಮೀರಗಳಲ್ಲಿ ತಲಾ ಒಂದು ಪ್ರಕರಣಗ ಹಾಗೂ ಕೇರಳದಲ್ಲಿ ೨ ಪ್ರಕರಣಗಳು ದಾಖಲಾಗಿವೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: India- sorcery – Cases – human – body- sacrifice