ಜಿ.ಟಿ ದೇವೇಗೌಡರ ನಿವಾಸಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಭೇಟಿ: ಜಿಟಿಡಿ ಜೆಡಿಎಸ್ ನಲ್ಲೇ ಉಳಿಯುವುದು ಖಚಿತ.

ಮೈಸೂರು,ಅಕ್ಟೋಬರ್,20,2022(www.justkannada.in): ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಜೆಡಿಎಸ್ ಅಸಮಾಧಾನಿತ ಶಾಸಕರ ಮನವೊಲಿಕೆಗೆ ಮುಂದಾಗಿದ್ದು ಈ ನಡುವೆ ಜೆಡಿಎಸ್ ನಿಂದ ದೂರ ಉಳಿದಿದ್ಧ ಶಾಸಕ ಜಿ.ಟಿ ದೇವೇಗೌಡರನ್ನ ಪಕ್ಷದಲ್ಲೇ ಉಳಿಸಿಕೊಳ್ಳಲು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಖುದ್ಧು ಅಖಾಡಕ್ಕಿಳಿದಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮೈಸೂರಿನಲ್ಲಿ ಶಾಸಕ ಜಿ.ಟಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಉಪಸ್ಥಿತರಿದ್ದರು.

ಹೆಚ್.ಡಿ ದೇವೇಗೌಡರ ಭೇಟಿ ನೀಡಿದ್ಧ ವೇಳೆ ಶಾಸಕ ಜಿ.ಟಿ ದೇವೇಗೌಡರು ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ ಭಾವುಕರಾಗಿ ಮಾತನಾಡಿದ ಅವರು, ನಾವು ಜೆಡಿಎಸ್ ಪಕ್ಷದಲ್ಲಿ ಬೆಳೆದಿದ್ದೇವೆ.  ಜೆಡಿಎಸ್  ಪಕ್ಷವನ್ನ ಕಟ್ಟುವುದೇ ನಮ್ಮ ಗುರಿ.  ನಾನು 3 ವರ್ಷ ದೂರ ಇದ್ದಾಗಲೂ ತಪ್ಪಾಗಿ ಅರ್ಥೈಸಿಲ್ಲ. ಜಿಟಿಡಿ ನಮ್ಮ ಹೆಸರು ಉಳಿಸುತ್ತಾನೆ ಎಂದು ನಂಬಿದ್ದಾರೆ. ರಾಜ್ಯದ ನೀರಾವರಿ ಅಭಿವೃದ್ಧಿಗೊಳಸಿದ್ದು ದೇವೇಗೌಡರು.  ದೇವೇಗೌಡರನ್ನ ಎಲ್ಲಾ ರಾಜ್ಯದ ಜನರು ಇಷ್ಟಪಡಿತ್ತಾರೆ. ರೈತರಿಗಾಗಿ ಜೆಡಿಎಸ್ ಇರೋದು. . ದೇವೇಗೌಡರ ಆಶಯ ರೈತರ ಸರ್ಕಾರ ತರೋದು ಎಂದರು.

ರಾಜ್ಯದಲ್ಲಿ ಕುಮಾರಣ್ಣನ ಸರ್ಕಾರ ಬರಬೇಕು. ನಮ್ಮ ಫ್ಯಾಮಿಲಿ ಜೆಡಿಎಸ್ ಜೊತೆ ಇರುತ್ತೇವೆ ಎಂದ ಜಿಟಿಡಿ ಅವರು, ಸಿದ್ಧರಾಮಯ್ಯ ಮತ್ತು ಬಿಜೆಪಿಗೆ ಕ್ಷಮೆಯಾಚಿಸಿದರು.

Key words: Former Prime Minister -HD Deve Gowda –visits- GT Deve Gowda-mysore

ENGLISH SUMMARY

Former PM H.D. Devegowda visits G.T. Devegowda’s residence: GTD to stay in JDS
Mysuru, October 20, 2022 (www.justkannada.in): As the assembly elections in the state is nearing, the JDS is making all attempts to convince the rebel JDS MLAs. JDS supremo and former Prime Minister H.D. Devegowda today visited MLA G.T. Devegowda, at the latter’s residence.
He was accompanied by former Chief Minister H.D. Kumaraswamy and JDS State President C.M. Ibrahim.
During the visit G.T. Devegowda touched the feet of H.D. Devegowda and received his blessings. “We have grown in politics through JDS. Our sole aim is to strengthen the party. Even in the last three years when I was away from the party, I have never criticized the party. It was H.D. Devegowda who developed the irrigational sector in the State. Entire people of the state loves him. It is his intention to bring a government to power which will support the farmers. Kumaraswamy’s government should come to power in the state. Our family will remain with JDS,” he said, and apologised Congress leader Siddaramaiah and the BJP.
Keywords: G.T. Devegowda/ former PM H.D. Devegowda/ JDS