ಬೆಂಗಳೂರು, ಅಕ್ಟೋಬರ್ 28, 2022 (www.justkannada.in): ಬೆಂಗಳೂರಿನಲ್ಲಿ ನವೆಂಬರ್ 5ರಂದು ಸಂಜೆ 4ರಿಂದ ರಾತ್ರಿ 8ಗಂಟೆವರೆಗೆ‘ಮಸೀದಿ ಪ್ರವಾಸ’ (Masjid Tour) ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಂಗಳೂರಿನ ಬೆನ್ಸನ್ ಟೌನ್ ನಲ್ಲಿರುವ ಮಿಲ್ಲರ್ ರಸ್ತೆಯ ಮಸ್ದೀಜ್-ಇ-ಖದ್ರಿಯಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ 4ರಿಂದ ರಾತ್ರಿ 8ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ.
‘ಮಸೀದಿ ಟೂರ್’ ಕುರಿತ ಮಾರ್ಗದರ್ಶನ, ಇಸ್ಲಾಮಿಕ್ ವಸ್ತು ಪ್ರದರ್ಶನ, ಪ್ರಾರ್ಥನೆಯನ್ನು ನೇರವಾಗಿ ನೋಡುವ ಅವಕಾಶ ಜತೆಗೆ ಈ ಕುರಿತು ಪಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಅವಕಾಶವಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು 9845741752, 9620212876, 9590852385 ಸಂಪರ್ಕಿಸಬಹುದು.