ಭೌತಶಾಸ್ತ್ರ ವಿಭಾಗದ ಬಗ್ಗೆ ನನಗೆ ಮೊದಲಿನಿಂದಲೂ ಒಲವು-ಪ್ರೊ.ಹೇಮಂತ್ ಕುಮಾರ್

ಮೈಸೂರು,ನವೆಂಬರ್,4,2022(www.justkannada.in):  ನಾನು ಅಧ್ಯಯನ ಮಾಡುತ್ತಿದ್ದ ಸಮಯದಿಂದಲೂ ನನಗೆ ಭೌತಶಾಸ್ತ್ರ ವಿಭಾಗದ ಮೇಲೆ ಏನೋ ಒಲವು ಇತ್ತು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮಾನಸ ಗಂಗೋತ್ರಿ ಭೌತಶಾಸ್ತ್ರದ ಅಧ್ಯಯನ ವಿಭಾಗದಲ್ಲಿ ರೂಸಾ ಅನುದಾನದಡಿ ನವೀಕರಿಸಲಾದ ಐನ್ಸ್‌ ಸ್ಟೈನ್ ಆಡಿಟೋರಿಯಂ ಅನ್ನು ಉದ್ಘಾಟಿಸಿ ಮಾತನಾಡಿದರು. ಮೈಸೂರು ವಿವಿಯಲ್ಲಿ ಕೆಲಸ ಮಾಡುತ್ತಿದ್ದ ಸಾಕಷ್ಟು ಅಧ್ಯಾಪಕರಿಗೆ ಬಡ್ತಿ ಸಿಕ್ಕಿರಲಿಲ್ಲ. ಐದು-ಆರು ವರ್ಷದಿಂದ ವಿಳಂಬವಾಗಿತ್ತು. ನನ್ನ ಅವಧಿಯಲ್ಲಿ ಹೆಚ್ಚು ಮಂದಿಗೆ ಬಡ್ತಿ ನೀಡಿದ್ದೇನೆ. ಎಲ್ಲಾ ವಿಭಾಗದಲ್ಲೂ ಬಡ್ತಿ ನೀಡಿದ್ದೇನೆ. ಆ ಮೂಲಕ ಅಧ್ಯಾಪಕರು ಉತ್ಸಾಹದಿಂದ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೇನೆ. ಇದು ನನಗೆ ಆತ್ಮತೃಪ್ತಿಯನ್ನೂ ನೀಡಿದೆ ಎಂದರು.

ನಾನು ಪಿಯುಸಿ ಮುಗಿದ ಮೇಲೆ ಎಂಜಿನಿಯರಿಂಗ್ ಮಾಡುವ ಒಲವಿತ್ತು. ಆಗ ಇದ್ದಿದ್ದೇ ರಾಜ್ಯದಲ್ಲಿ 14 ಎಂಜಿನಿಯರಿಂಗ್ ಕಾಲೇಜು. ನನಗೆ ಬಾಗಲಕೋಟೆಯಲ್ಲಿ ಸೀಟು ಸಿಕ್ಕಿದರೂ ನಾನು ಹೋಗಲಿಲ್ಲ. ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡುವ ಅಂತ ನಿರ್ಧರಿಸಿದೆ. ಅದಕ್ಕಾಗಿ ಭೌತಶಾಸದಲ್ಲಿ ಪ್ರವೇಶ ಕೂಡ ಪಡೆದೆ. ಆದರೆ, ಸಣ್ಣ ಅಪಘಾತದಲ್ಲಿ ಕೈಗೆ ಗಾಯ ಮಾಡಿಕೊಂಡು ಪರೀಕ್ಷೆ ಬರೆಯಲು ಆಗಲಿಲ್ಲ. ನಂತರ ಬಿಇಡಿ ಮಾಡಿದೆ. ಜೊತೆಗೆ ಕಂಪ್ಯೂಟರ್ ಸೈನ್ಸ್‌ ನಲ್ಲಿ ಎಂಎಸ್ಸಿ ಮಾಡಿದೆ. ಮೊದಲ ರ್ಯಾಂಕ್ ಕೂಡ ಪಡೆದೆ. ಹೀಗಾಗಿ ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡುವ ಕನಸು ನನಸಾಗಲಿಲ್ಲ ಎಂದರು.

ಕಂಪ್ಯೂಟರ್ ಸೈನ್ಸ್ ಓದಿ ಅಧ್ಯಾಪಕನಾದೆ, ಕುಲಪತಿಯಾದೆ. ಇದು ನನಗೆ ಎಲ್ಲವನನ್ನೂ ನೀಡಿದೆ. ಹಣ, ಹುದ್ದೆ, ಹೆಸರು ಎಲ್ಲಾ ನೀಡಿದೆ. ಆದರೂ ನನ್ನ ಮನಸ್ಸಲ್ಲಿ ಭೌತಶಾಸ್ತ್ರದ ಬಗ್ಗೆ ವಿಶೇಷ ಪ್ರೀತಿ ಇದೆ. ಖ್ಯಾತ ಪ್ರಾಧ್ಯಾಪಕರು ಈ ವಿಭಾಗದಲ್ಲಿ ಪಾಠ ಮಾಡಿದ್ದಾರೆ. ಸಣ್ಣ ವಿಭಾಗ ಇಂದು ದೊಡ್ಡದಾಗಿ ಬೆಳೆದಿದೆ. ಮಂಗಳೂರು, ಶಿವಮೊಗ್ಗದಿಂದ ಕೂಡ ಇಲ್ಲಿಗೆ ಓದಲು ವಿದ್ಯಾರ್ಥಿಗಳು ಬರುತ್ತಿದ್ದರು ಎಂದು ತಮ್ಮ ಹಳೆ ದಿನಗಳನ್ನು ಮೆಲುಕು ಹಾಕಿದರು.

ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರೊ.ಎ.ಪಿ.ಜ್ಞಾನ ಪ್ರಕಾಶ್, ಪಿಎಂಇಬಿ ನಿರ್ದೇಶಕ ಪ್ರೊ.ಎನ್.ಕೆ.ಲೋಕನಾಥ್, ಪ್ರೊ. ಶ್ರೀಧರ್ ಸೇರಿದಂತೆ ಇತರರು ಇದ್ದರು.

Key words: mysore university-VC- Prof. Hemanth Kumar-physics -department

ENGLISH SUMMARY…

“I am inclined towards physics from the beginning: Prof. G. Hemanth Kumar
Mysuru, November 4, 2022 (www.justkannada.in): “I am inclined towards physics since my college days,” observed Prof. G. Hemanth Kumar, Vice-Chancellor, University of Mysore.
He inaugurated the Einstein Auditorium, in the Physics Research Department, Manasa Gangotri, that has been renovated under the RUSA grants. In his address, he said, “Many lecturers who were working in the University of Mysore had not received promotions. It was delayed by 5-6 years. However, I have attempted to give promotions during my tenure in all the departments. This way I have made sincere efforts for the teachers to work with enthusiasm. I am also self-content about this.:
“After completing PUC I was intending to join BE. There were only 14 engineering colleges in the State then. I also had got a seat in Bagalkote, but I didn’t go. I decided to do M.Sc. in Physics and also enrolled for the course. But I suffered a hand fracture in an accident and couldn’t appear for the exams. After that I did B.Ed, with an M.Sc. in Computers. I got first rank in it. Thus, my dream of pursuing M.Sc. in Physics become true,” he added.
“Later I became a lecturer and also the Vice-Chancellor. This post has given me everything, money, designation, name, fame, etc. But, even today I have special inclination towards physics. Renowned teachers have taught in the Physics department in our university. Earlier it was a small department, which has grown today. Students from other districts like Mangaluru, Shivamogga also used to come here for studies,” he observed.
Registrar Prof. R. Shivappa, Examination Registrar Prof. A.P. Jnanaprakash, PMEB Director Prof. N.K. Loknath, Prof. Sridhar, and others were present.
Keywords: University of Mysore/ Prof. G. Hemanth Kumar/ Physics/ inclination