ನವದೆಹಲಿ,ನವೆಂಬರ್,9,2022(www.justkannada.in): ಸುಪ್ರಿಂ ಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾ. ಡಿವೈ ಚಂದ್ರಚೂಡ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯ ನ್ಯಾಯಮೂರ್ತಿಯಾಗಿದ್ದ ಉದಯ್ ಉಮೇಶ್ ಲಲಿತ್ ಅವರು ನಿವೃತ್ತಿ ಹಿನ್ನೆಲೆ ಡಿವೈ ಚಂದ್ರಚೂಡ್ ಅವರನ್ನ ನೂತನ ಸಿಜೆಐ ಆಗಿ ನೇಮಕ ಮಾಡಲಾಗಿತ್ತು. ಇಂದು ರಾಷ್ಟ್ರಪತಿ ಭವನದಲ್ಲಿ ಸುಪ್ರೀಂಕೋರ್ಟ್ 50ನೇ ಸಿಜೆಐ ಆಗಿ ನ್ಯಾ. ಚಂದ್ರಚೂಡ ಅವರು ಪ್ರಮಾಣವಚನ ಸ್ವೀಕಾರ ಮಾಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ನವೆಂಬರ್ 11, 1959ರಂದು ಜನಿಸಿದ ನ್ಯಾಯಮೂರ್ತಿ ಚಂದ್ರಚೂಡ್ ಮೇ 13, 2016ರಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು.
ಡಿವೈ ಚಂದ್ರಚೂಡ್ ಅವರ ತಂದೆ ಜಸ್ಟಿಸ್ ವೈವಿ ಚಂದ್ರಚೂಡ್ 1978ರ ಫೆಬ್ರವರಿ 2ರಿಂದ 1985ರ ಜುಲೈ 11ರವರೆಗೆ ಭಾರತದ 16ನೇ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು.
Key words: Supreme Court – 50th CJI-Chandrachud- taking -oath.