ನವದೆಹಲಿ, ಆಗಸ್ಟ್ 18, 2019 (www.justkannada.in): ನೀವು ಟಿಕ್ ಟಾಕ್ ಆ್ಯಪ್ ಬಳಸುತ್ತೀದ್ದೀರಾ? ಹಾಗಾದರೆ ಈ ಸುದ್ದಿಯನ್ನು ಕಡ್ಡಾಯವಾಗಿ ಓದಿ…
ಟಿಕ್ ಟಾಕ್ ಬಳಕೆದಾರರಿಗೆ ತಿಳಿಯದಂತೆ ಡೇಟಾವನ್ನು ಕದಿಯುವ ಮೋಸದ ಜಾಲವೊಂದು ಪತ್ತೆಯಾಗಿದೆ. ಟಿಕ್ಟಾಕ್ ನಕಲಿ ಫೋಟೋಗಳನ್ನು ಬಳಸಿ ಖಾತೆಗಳನ್ನು ತೆರೆಯಲಾಗುತ್ತದೆ. ಬಳಕೆದಾರರು ಈ ಖಾತೆಗಳ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದಂತೆ ವಯಸ್ಕರ ಡೇಟಿಂಗ್, ಅಶ್ಮೀಲ ಡೇಟಿಂಗ್ ಸೈಟ್ಗೆ ಕರೆದೊಯ್ಯುತ್ತದೆ.
ವೆಬ್ಸೈಟ್ನಲ್ಲಿ ಅಡಕವಾಗಿರುವ ಫೋಟೋ, ವಿಡೀಯೋವನ್ನು ನೋಡಲು ಮುಂದಾದರೆ ಹಣ ಪಾವತಿ ಮಾಡಬೇಕಾಗುತ್ತದೆ. ಇದರಿಂದ ಗ್ರಾಹಕರ ಮಾಹಿತಿ ಸೋರಿಕೆಯಾಗುತ್ತದೆ. ಅಲ್ಲದೇ ಹಣ ಪಾವತಿಸಿದ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ಗಳ ಮಾಹಿತಿಗಳು ಹ್ಯಾಕರ್ಗಳ ಪಾಲಾಗುತ್ತವೆ.