ಕಲ್ಬುರ್ಗಿ,ನವೆಂಬರ್14,2022(www.justkannada.in): ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚಿದರೇ ತಪ್ಪಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.
ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಸರ್ಕಾರಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲು ಆದೇಶ ಮಾಡಿಲ್ಲ. ಕೊಠಡಿ ನಿರ್ಮಿಸುವ ಇಂಜಿನಿಯರ್ ಬಣ್ಣ ಹಚ್ಚಿದರೇ ಹಚ್ಚಬಹುದು. ಶಾಲಾ ಕೊಠಡಿಗೆ ಕೇಸರಿ ಬಣ್ಣ ಹಚ್ಚಿದರೇ ತಪ್ಪಲ್ಲ. ಶಾಲಾ ಕೊಠಡಿಗಳ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ . ವಿವೇಕ ಯೋಜನೆಯಡಿ ರಾಜ್ಯದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ. ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ವಿವಾದ ಮಾಡುತ್ತಿವೆ ಎಂದರು.
Key words: not wrong – paint- school rooms -Education Minister -BC Nagesh