ನವದೆಹಲಿ,ಮೇ 7,2019(www.justkannada.in): ಲೋಕಸಭಾ ಚುನಾವಣೆಯ ಮತ ಏಣಿಕೆ ವೇಳೆ ಇವಿಎಂನ ಮತಗಳ ಜತೆ ಶೆ. 50 ರಷ್ಟು ವಿವಿಪ್ಯಾಟ್ ಚೀಟಿಗಳನ್ನ ತಾಳೆ ಮಾಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಇವಿಎಂ ಮತಗಳ ಜತೆಗೆ ವಿವಿ ಪ್ಯಾಟ್ ಚೀಟಿ ತಾಳೆ ಮಾಡಬೇಕೆಂದು ಆಗ್ರಹಿಸಿ ವಿಪಕ್ಷಗಳು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಲೋಕಸಭಾ ಕ್ಷೇತ್ರದ ಪ್ರತಿ ಅಸೆಂಬ್ಲಿ ವಿಭಾಗದಲ್ಲಿ ಐದು ವಿವಿ ಪ್ಯಾಟ್ ಗಳನ್ನ ತಾಳೆ ನೋಡಬೇಕು ಎಂದು ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.
ಆದರೆ ಐದು ವಿವಿ ಪ್ಯಾಟ್ ಗಳ ಬದಲಿಗೆ ಶೇ,50 ರಷ್ಟು ವಿವಿ ಪ್ಯಾಟ್ ಗಳನ್ನ ತಾಳೆ ನೋಡಬೇಕೆಂದು ಆಗ್ರಹಿಸಿ ಸುಪ್ರೀಂಕೋರ್ಟ್ ಗೆ ವಿಪಕ್ಷಗಳು ಮರುಪರಿಶೀಲನಾ ಅರ್ಜಿಯನ್ನ ಸಲ್ಲಿಸಿದ್ದವು. ವಿಪಕ್ಷಗಳ ಮರುಪರಿಶೀಲನಾ ಅರ್ಜಿಯನ್ನ ತಿರಸ್ಕರಿಸಿರುವ ಸುಪ್ರೀಂಕೋರ್ಟ್ , ತನ್ನ ಮೊದಲಿನ ಆದೇಶ ಮಾರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇನ್ನು ವಿಪಕ್ಷಗಳ ಪರವಾಗಿ ಹಿರಿಯ ನಾಯಕ, ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದ್ದರು.
Key words: A 50%- VvVPat — with -EVM –votes-Supreme Court –rejected -petition – opposition.