ಆಶಾ ಕೃಷ್ಣಸ್ವಾಮಿ, ಹಿರಿಯ ಪತ್ರಕರ್ತರು, ಬೆಂಗಳೂರು.
ಹಿಂದಿನ ರಾಜಕೀಯ ಧುರೀಣರ ಬಗ್ಗೆ ಓದುವುದೆಂದರೆ, ಅದರಲ್ಲೂ ವಿಶೇಷವಾಗಿ ಈಗಿನ ರಾಜಕೀಯ ವರದಿಗಾರರಿಗೆ ಯಾವಾಗಲೂ ಅತೀವ ಕುತೂಹಲ ಮತ್ತು ಆಸಕ್ತಿ. ಕರ್ನಾಟಕದಲ್ಲಿ ಹಿಂದೆ ಹಲವಾರು ಪ್ರಖ್ಯಾತ ರಾಜಕಾರಣಿಗಳ ಒಂದು ದೊಡ್ಡ ಪಡೆಯೇ ಸೃಷ್ಟಿಯಾಗಿತ್ತು. ಜಯದೇವಪ್ಪ ಹಾಲಪ್ಪ ಪಟೇಲ್ ಅವರು ಅಂತಹ ಖ್ಯಾತನಾಮರಲ್ಲೊಬ್ಬರು. ಸದ್ಯದಲ್ಲೇ ಪಟೇಲರ ಕುರಿತಾದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕವನ್ನು ಹೊರತರಲಾಗುತ್ತಿದೆ. ಈ ಪುಸ್ತಕವನ್ನು, ಎರಡು ದಶಕಗಳ ಹಿಂದೆ ಅವರ ಕುಟುಂಬದವರು ಸ್ಥಾಪಿಸಿದ್ದ ಜೆ.ಎಚ್.ಪಟೇಲ್ ಪ್ರತಿಷ್ಟಾನದಿಂದ ಹೊರತರಲಾಗುತ್ತಿದೆ. ಈ ಪುಸ್ತಕ ಪ್ರಕಟವಾಗುತ್ತಿರುವುದಕ್ಕೆ, ಪಟೇಲರ ವಿಶೇಷ ಕರ್ತವ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಡಾ.ಎಂ.ಎಲ್. ಶಂಕರಲಿಂಗಪ್ಪನವರಿಗೆ ಅಭಿನಂದನೆಗಳು ಸಲ್ಲುತ್ತವೆ.
ಈ ಪುಸ್ತಕವು ಅಕ್ಟೋಬರ್ 1 ರಂದು ಸಾಯಂಕಾಲ 5 ಗಂಟೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್, ಇಲ್ಲಿ ಔಪಚಾರಿಕವಾಗಿ ಬಿಡುಗಡೆಗೊಳ್ಳಲಿದೆ. ರಾಜಕಾರಣಿಗಳ ಒಂದು ದೊಡ್ಡ ಪಡೆಯೇ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 237 ಪುಟಗಳ ಈ ಪುಸ್ತಕದಲ್ಲಿ, ಹೆಚ್ಚಿನ ಲೇಖನಗಳೆಲ್ಲಾ ಪತ್ರಿಕಾ ಮಾಧ್ಯಮದವರ ಕೊಡುಗೆಗಳೇ, ಈ ಪುಸ್ತಕದ ಬೆಲೆ ರೂ.300,( ಹಾರ್ಡ್ ಬೌಂಡ್), ರೂ.250(ಪೇಪರ್ ಬ್ಯಾಕ್). 42 ಲೇಖನಗಳಲ್ಲಿ 7 ಲೇಖನಗಳು ಇಂಗ್ಲಿಷಿನಲ್ಲಿವೆ, ಅದರಲ್ಲಿ ನನ್ನ ಒಂದು ಲೇಖನವೂ ಸೇರಿದೆ, ಉಳಿದವುಗಳೆಲ್ಲಾ ಕನ್ನಡದಲ್ಲಿವೆ. ಆಸಕ್ತರು ಈ ಕೆಳಗಿನ ಈ-ಮೇಲ್ ವಿಳಾಸಕ್ಕೆ ಬರೆದು ಪುಸ್ತಕವನ್ನು ಖರೀದಿಸಬಹುದು. mlslingappa@yahoo.com
ಈ ಪುಸ್ತಕದ ಮುನ್ನುಡಿಯನ್ನು ಡಾ. ಚಂದ್ರಶೇಖರ ಕಂಬಾರರು ಬರೆದಿರುತ್ತಾರೆ. ಅದು ಗಮನವನ್ನು ಸೆಳೆಯುವಂತಹ ಆಕರ್ಷಕ ಬರಹ. ಅವರು ಸಾಗರದ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಕಾಗೋಡು ತಿಮ್ಮಪ್ಪನವರ ಮನೆಯ ಪಕ್ಕದಲ್ಲೇ ಅವರ ಮನೆಯೂ ಇತ್ತು. ಅಲ್ಲಿ ಗೋಪಾಲಗೌಡರು, ಎಸ್.ಬಂಗಾರಪ್ಪ, ಕೋಣಂದೂರು ಲಿಂಗಪ್ಪ ಮತ್ತು ಜೆ.ಎಚ್. ಪಟೇಲರು ಇವರೆಲ್ಲಾ ಸೇರುತ್ತಿದ್ದರು. “ ಈ ಐವರನ್ನು ನಾವು ಪಂಚಮರು ಅಂತ ಕರೆಯುತ್ತಿದ್ದೆವು. ಇವರ ಬಗ್ಗೆ ನಾನೊಂದು ಪದ್ಯವನ್ನೂ ಬರೆದದ್ದಿದೆ. ಈ ಪಂಚಮರ ಒಗ್ಗಟ್ಟು, ನಂಬಿದ ತತ್ವಗಳಿಗೆ ಬದ್ಧರಾಗಿ ವಿಧಾನಸೌಧ ಮತ್ತು ಸಮಾಜದಲ್ಲಿ ಚರ್ಚಿಸಿದ್ದು, ವಾದಿಸಿ ಸಮರ್ಥಿಸಿಕೊಂಡದ್ದು ಇವನ್ನ ನಾನೆಂದೂ ಮರೆಯಲಾರೆ. ಈ ಪಂಚಮರು ಸನ್ಮಾನ್ಯ ದೇವರಾಜ ಅರಸು ಅವರನ್ನು ಬೆಂಬಲಿಸಿ ಕೊನೆಗೂ ಉಳುವವನೇ ಭೂಮಿಯೊಡೆಯ ಕಾಯ್ದೆಯನ್ನು ಜಾರಿಗೆ ತಂದದ್ದು ಈಗ ಇತಿಹಾಸ,” ಎಂದು ಕಂಬಾರರು ನೆನಪಿಸಿಕೊಳ್ಳುತ್ತಾರೆ. ಪಟೇಲರು ಲೋಕಸಭೆಯಲ್ಲಿ ಅಚ್ಚಕನ್ನಡದಲ್ಲಿ ಭಾಷಣ ಮಾಡಿದ್ದನ್ನು ಅವರು ಬಹಳ ಶ್ಲಾಘಿಸುತ್ತಾರೆ. ಈ ಪುಸ್ತಕವನ್ನು ಪ್ರಕಾಶಿಸಿದ್ದಕ್ಕೆ ಅವರು ಶಂಕರಲಿಂಗಪ್ಪನವರನ್ನು ಅಭಿನಂದಿಸಿದ್ದಾರೆ.
ಶಂಕರಲಿಂಗಪ್ಪನವರು, ತಮ್ಮ ಸಂಪಾದಕೀಯ ಬರಹದಲ್ಲಿ ಪಟೇಲರ ಮರಣದ 21 ವರ್ಷಗಳ ನಂತರ ಈ ಪುಸ್ತಕವು ಪ್ರಕಾಶನಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಅವರ ಅಭಿಪ್ರಾಯಗಳು, ಕಾರ್ಯನಿರ್ವಹಣೆಯ ವೈಖರಿ ಎಲ್ಲವೂ ಇಂದಿಗೂ ಚರ್ಚೆಗೆ ಒಳಗಾಗುತ್ತಿವೆ ಮತ್ತು ಅವು ಈಗಲೂ ಪ್ರಸ್ತುತವಾಗಿವೆ. ಈಗಿನ ತಲೆಮಾರಿನವರು ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ. “ ನನ್ನ ಮಾಧ್ಯಮಮಿತ್ರರು ಪಟೇಲರೊಂದಿಗೆ ಕಳೆದ ಸಮಯದ ಬಗ್ಗೆ ಪದೆ ಪದೇ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ ಮತ್ತು ಅದರ ಬಗ್ಗೆ ಬರೆಯುತ್ತಲೂ ಇರುತ್ತಾರೆ. ಪಟೇಲರಿಗೆ ಪತ್ರಕರ್ತರ ಬಗ್ಗೆ ವಿಶೇಷ ಒಲವಿತ್ತು. ಅವರಿಗಾಗಿ ಬಹಳಷ್ಟು ಔತಣಕೂಟಗಳನ್ನು ಏರ್ಪಡಿಸುತ್ತಿದ್ದರು. ಪಟೇಲರು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳ ಬೆಳವಣಿಗೆಯನ್ನು ಗಮನಿಸುತ್ತಿದ್ದರು. ಅವರು ಬೆಳಗಿನ ಹೊತ್ತು ಒಂದು ಕಪ್ ಚಹಾ ಮತ್ತು ಬೀಡಾ ಸೇವನೆಯ ನಂತರ ಕಡಿಮೆಯೆಂದರೂ ಒಂದು ಗಂಟೆ ಕಾಲ ವೃತ್ತಪತ್ರಿಕೆಗಳನ್ನು ಓದುತ್ತಿದ್ದರು. ಮಾಧ್ಯಮದವರು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅದು ಈ ಪುಸ್ತಕದ ಎಲ್ಲಾ ಲೇಖನಗಳಲ್ಲಿ ಪ್ರತಿಫಲನಗೊಂಡಿದೆ”, ಎನ್ನುತ್ತಾರೆ ಶಂಕರಲಿಂಗಪ್ಪನವರು.
ಪಟೇಲರ ಪ್ರಕಟಿತ ಲೇಖನವೊಂದನ್ನು ಇಲ್ಲಿ ಸೇರಿಸಲಾಗಿದೆ. ಪತ್ರಕರ್ತರ ಲೇಖನಗಳೊಂದಿಗೆ ಶಾಸಕರಾದ ಎಂ.ಸಿ. ನಾಣಯ್ಯ ಮತ್ತು ಬಸವರಾಜ ಹೊರಟ್ಟಿ ಇವರ ಬರಹಗಳನ್ನೂ ಇಲ್ಲಿ ನೋಡಬಹುದು.
ಪಟೇಲರ ವ್ಯಂಗ್ಯಭರಿತ ಹಾಸ್ಯ ಮತ್ತು ವಿಡಂಬನೆಯ ಬಗ್ಗೆ ಪ್ರತಿಯೊಬ್ಬ ಬರಹಗಾರರೂ ಇಲ್ಲಿ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ನಾನೂ ಬರೆದಿದ್ದೇನೆ. ಪಟೇಲರು ಮುಖ್ಯಮಂತ್ರಿಗಳಾಗಿದ್ದಾಗ, ನಾನು ಓರ್ವ ಕಿರಿಯ ವರದಿಗಾರಳಾಗಿದ್ದೆ. ಅವರ ಸಭೆಗಳಿಗೆ ಮತ್ತು ಪತ್ರಿಕಾಗೋಷ್ಟಿಗಳಿಗೆ ಹೋಗಿದ್ದೆ, ಆದರೆ ಅವರೊಂದಿಗೆ ಮಾತಾಡಿರಲಿಲ್ಲ. ಇಂಗ್ಲಿಷ್ ಪತ್ರಿಕೆ-ಮಾದ್ಯಮಗಳ ವರದಿಗಾರರಿಗೆ ಅವರು ಶಾಸನಸಭೆಗಳಲ್ಲಿ ಮಾಡುತ್ತಿದ್ದ ಟೀಕೆ-ಟಿಪ್ಪಣಿಗಳನ್ನು ವರದಿ ಮಾಡಲು ಕಷ್ಟವೆನಿಸುತ್ತಿತ್ತು. ಏಕೆಂದರೆ ಅವರಾಡುತ್ತಿದ್ದ ಒಂದು ಹಾಸ್ಯಮಯ ವಾಕ್ಯದಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಸಂಗತಿಗಳ ಉಲ್ಲೇಖಗಳಿರುತ್ತಿದ್ದವು. ಅವರು ಅದ್ವೈತ ತತ್ವಜ್ಞಾನದೊಂದಿಗೆ ತಮ್ಮ ಮಾತನ್ನು ಮುಗಿಸುತ್ತಿದ್ದರು. ಕನ್ನಡ ವಾಕ್ಯಗಳನ್ನೇ ಉದ್ಧರಿಸಿದಾಗ ಅದು ಹೆಚ್ಚಿನ ಪರಿಣಾಮ ಬೀರುತ್ತಿದ್ದುದರಿಂದ, ಆ ಮಾತುಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದಾಗ ಅದರ ರುಚಿ ಕಳೆದುಹೋಗುತ್ತಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಯಾವ ವಿಚಾರಗಳನ್ನು ಸಂಕೀರ್ಣವಾಗಿ ಹೇಳುತ್ತಿರಲಿಲ್ಲ. ಅವರ ಹಾಸ್ಯಪ್ರಜ್ಞೆ ಯಾವಾಗಲೂ ಅವರ ರಕ್ಷಣೆಗೆ ಇರುತ್ತಿತ್ತು. ಬಜೆಟ್ ಅಧಿವೇಶನಗಳ ಚರ್ಚೆಗಳಲ್ಲಿಯೂ ಅವರು ಎಂದೂ ವಿವರವಾದ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.
ನಾನು ನೋಡಿರುವಂತೆ, ಪಟೇಲರು ಎಂದೂ ತಮ್ಮ ವಿರೋಧಿಗಳನ್ನು ಎದುರುಹಾಕಿಕೊಳ್ಳುವುದಾಗಲೀ ಅವರನ್ನು ಟೀಕಿಸುವುದಾಗಲೀ ಮಾಡುತ್ತಾ ಸಮಯವ್ಯರ್ಥ ಮಾಡುತ್ತಿರಲಿಲ್ಲ. ಅವರು ಸಂಯಮದಿಂದ ಮಾತಾಡುತ್ತಿದ್ದರು. ಬುದ್ಧಿವಂತ ಸಮಾಜವಾದಿ ನಾಯಕನೊಬ್ಬನನ್ನು ಅರ್ಥಮಾಡಿಕೊಳ್ಳುವುದು ಓರ್ವ ಸಾಮಾನ್ಯ ರಾಜಕಾರಣಿಗೆ ಬಹಳ ಕಷ್ಟವೆನಿಸುತ್ತಿತ್ತು. 1996 ರಲ್ಲಿ ವಿಶ್ವಸುಂದರಿ ಸ್ಪರ್ಧೆ ಬೆಂಗಳೂರಿನಲ್ಲಿ ನಡೆದಾಗ, ಅವರು ಮುಖ್ಯಮಂತ್ರಿಗಳಾಗಿದ್ದರು. ಮಹಿಳೆಯರ ಗುಂಪೊಂದು ಇದರಿಂದ ವ್ಯಭಿಚಾರ ಮತ್ತು ವೇಶ್ಯಾವಾಟಿಕೆ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಅದನ್ನು ವಿರೋಧಿಸಿದ್ದರು. ಪ್ರತಿಭಟನಾಕಾರರು ತಮ್ಮ ಜೀವ ಕಳೆದುಕೊಳ್ಳುವುದಾಗಿ ಶಪಥ ಮಾಡಿದ್ದರು. ಪಟೇಲರು ಪ್ರತೀಕಾರದ ಕ್ರಮ ತೆಗೆದುಕೊಳ್ಳಲಿಲ್ಲ, ಬದಲಾಗಿ ಪೋಲೀಸರಿಗೆ ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆಗಳನ್ನು ನೀಡಿದರು.
ನಾನು ಕೆಲಸಮಾಡುತ್ತಿದ್ದ ಪತ್ರಿಕೆಯವರು ಆತ್ಮಹತ್ಯೆ ಬೆದರಿಕೆಗಳಿಗೆ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಪಡೆಯಲು ನನಗೆ ಒತ್ತಾಯಿಸಿದ್ದರು. ಪಟೇಲರು ಬಹಳ ಹೊತ್ತಿನ ವರೆಗೆ ಮೌನವಾಗಿಯೇ ಇದ್ದರು. ಅವರು ಒಂದೇ ಪದದಲ್ಲಿ ಉತ್ತರಿಸಿದರು- ತೋರಿಸೋರು ತೋರಿಸ್ತಾರೆ; ನೋಡೋರು ನೋಡ್ತಾರೆ. ಇಂತಹ ಬೆಳವಣಿಗೆಗೆ ಒಂದೇ ಒಂದು ಪದದಲ್ಲಿ ಪ್ರತಿಕ್ರಿಯೆ ನೀಡಿದ್ದು ಜಾಗತಿಕ ಮಾಧ್ಯಮದ ಗಮನ ಸೆಳೆಯಿತು! ಪಟೇಲರು ಮಾತ್ರ ಅಂತಹ ಉತ್ತರಗಳನ್ನು ನೀಡಬಲ್ಲರು ಮತ್ತು ಅದರಿಂದ ಪಾರಾಗಬಲ್ಲರು. ಅವರು ಈಗ ಇಲ್ಲಿ ಇದ್ದಿದ್ದರೆ, ಈಗಿನ ವಿದ್ಯಮಾನಗಳಿಗೆಲ್ಲಾ ಸಾಕಷ್ಟು ವಿನೋದದ ಸಾಮಗ್ರಿ ಒದಗಿಸಿರುತ್ತಿದ್ದರು. ಪಟೇಲರ ಇಂತಹ ಹಾಸ್ಯಮಯವಾದ ಬುದ್ಧಿವಂತಿಕೆಯ ಉತ್ತರಗಳನ್ನು ಯಾರಾದರೂ ನೆನಪುಮಾಡಿಕೊಳ್ಳಬಹುದು.
ಅಷ್ಟೊಂದು ಚೆನ್ನಾಗಿ ಓದಿಕೊಂಡ, ಸುಸಂಸ್ಕೃತರಾದ ಮತ್ತು ತಮ್ಮ ಆದರ್ಶ-ವಿಚಾರಗಳಿಗೆ ಬದ್ಧರಾಗಿಯೂ ತಮ್ಮ ತಪ್ಪುಗಳನ್ನು ಮತ್ತು ದೌರ್ಬಲ್ಯಗಳನ್ನು ನೇರವಾಗಿ ಒಪ್ಪಿಕೊಳ್ಳುವಂತಹ ರಾಜಕಾರಣಿಗಳು ನೋಡಸಿಗುವುದು ಅಪರೂಪ. ಇಂತಹ ಗುಣಗಳ ಬಗ್ಗೆ ಮರೆತುಬಿಡಬೇಕೇನೋ; ಒಳ್ಳೆಯ ಹಾಸ್ಯಪ್ರಜ್ಞೆಯೂ ಕಾಣುತ್ತಿಲ್ಲ. ಪಟೇಲರು ಮದ್ಯ ಮತ್ತು ಮಾನಿನಿಯರ ಬಗ್ಗೆ ತಮಗಿರುವ ಒಲವನ್ನು ಎಂದೂ ಗುಟ್ಟಾಗಿಡಲಿಲ್ಲ. ಅವರ ನಡವಳಿಕೆಗಳು ಎಂದೂ ಅವರನ್ನು ಮೌಲ್ಯಮಾಪನ ಮಾಡುವ ಒಂದು ಮಾನದಂಡವಾಗಿ ಉಪಯೋಗಿಸಲ್ಪಡಲಿಲ್ಲ. ತಮ್ಮ ಬಗ್ಗೆ ಮಾದ್ಯಮಗಳಲ್ಲಿ ಪ್ರಸಾರವಾಗುವುದನ್ನು ತಡೆಗಟ್ಟಲು ನ್ಯಾಯಾಲಯದ ಮೊರೆ ಹೋಗುವಂತಹ ‘ಸಿ ಡಿ ರಾಜಕಾರಣಿ’ಗಳನ್ನು ನಾವೀಗ ನೋಡುತ್ತಿದ್ದೇವೆ.
ಕನ್ನಡಕ್ಕೆ: ಕೆ.ಪದ್ಮಾಕ್ಷಿ
english summery; It’s always fascinating to read about political stalwarts from the past, especially for a present political reporter. In the past, Karnataka has produced a slew of well-known politicians. Jayadevappa Halappa Patel is one such personality. Soon, a book including a collection of articles on Patel will be released. The book has been published by the J H Patel Prathisthana, which his family founded two decades ago. Dr. M L Shankarlingappa, who served as an Officer on Special Duty with Patel, deserves credit for getting it published.
The book will be formally released on October 1 at 5 p.m. at Bengaluru’s Chitra Kala Parishat. A host of politicians are expected to participate in the event. The 237-page book, which features mostly journalistic contributions, is priced at Rs 300 (hardbound) and Rs 250 (paperback) (perfect bound). Seven of the 42 articles are written in English, including the one I contributed, while the rest are in Kannada. Send an email to mlslingappa@yahoo.com if you’re interested in purchasing it.
The book’s preface is authored by Dr. Chandrashekar Kambar but is quite engaging. Kambar worked as a lecturer at a college in Sagar. He lived next door to Kagodu Thimmappa’s house, which was a meeting place for Gopala Gowda, S Bangarappa, Konandur Lingappa, and J H Patel. “We used to refer to these five as Panchamaru. On these Panchamaru I have written a poem. They never wavered in their convictions. They proclaimed them in Vidhana Soudha and other places. They supported Devaraj Urs in his efforts to put the land reforms into effect, “Kambar reminisces. Patel’s ability to deliver a speech in Kannada in the Lok Sabha is something he admires. He also applauds Shankarlingappa on the publication of the book.
Shankarlingappa writes in his editor’s note that the book is being published 21 years after Patel’s death. His views and style of functioning are still being debated and are relevant too. The present generation should learn more about him. “My colleagues in the media frequently reminisce about their time with Patel and write about it. Patel had a special liking for journalists. He threw them a lot of parties. Patel used to keep up with local, national, and international news. He used to read newspapers for at least an hour in the mornings after a cup of tea and a beeda. The media had a good understanding of him. That is well reflected in the articles here “, says Shankarlingappa.
An article published by Patel is reproduced in the book. There are also writings from legislators M C Nanaiah and Basavaraj Horatti in addition to the contributions of journalists.
Patel’s wry humour and satire have been mentioned by every writer in this book. This is something I’ve done myself. When Patel was the chief minister, I was a junior correspondent. I had gone to his meetings and press conferences but had not spoken to him. English media reporters used to find it difficult to cover his comments in the legislative assembly as there were references to mythological or historical features hidden under his one humorous sentence. He would finish with advaitha philosophy. Reproducing his Kannada sentences used to make more impact than translating into English and losing the flavor. More than anything, he never complicated any issues. His sense of humour was always there to save him. Even during budget debates, he never delivered a detailed response.
As far as I had seen, Patel never wasted time countering or criticising his opponents. His language used to be restraint. This socialist leader with intelligence was tough to comprehend for a regular politician. The Miss World Beauty pageant was held in Bengaluru in 1996, when he was the chief minister. It was opposed by a group of women who claimed it would increase promiscuity and prostitution in India. Protesters have vowed to take their own lives. Patel did not retaliate other than to instruct the cops to maintain a high level of security.
My office pressed me to obtain the chief minister’s response to the suicide threats. He remained silent for a long time. It was just a syllable when he eventually responded – Thorisoru thoristhaare; nodoru nodthare (Meaning, those who want to show will do; those who want to see will see.) Just a line of response for a development which had attracted the global media attention! Only Patel could indeed give such replies and get away. If he was to be here now, he would have provided sufficient stuff for memes. One can recollect many such witty replies by Patel.
We no longer have politicians who are well-read, cultured, and forthright enough to admit their follies as well as shortcomings while sticking to their ideals. Forget about all of these traits; even a good sense of humour is lacking. Patel did not hide his liking for wine and women. His behaviours were never used as a criterion for evaluating him. We now have ‘CD politicians’ who keep approaching court of law to stop the media from publishing about them.
Asha Krishnaswamy