ಕಾಮನ್’ವೆಲ್ತ್ ಕ್ರೀಡಾಕೂಟಕ್ಕೆ ಇಂದು ಅದ್ಧೂರಿ ಚಾಲನೆ

ಬೆಂಗಳೂರು, ಜುಲೈ 28, 2022 (www.justkannada.in):  ಅತಿದೊಡ್ಡಕ್ರೀಡಾಕೂಟವಾದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಇಂದು ಅದ್ಧೂರಿ ಚಾಲನೆ ಸಿಗಲಿದೆ.

ಇಂದಿನಿಂದ ಆಗಸ್ಟ್‌ 8ರವರಗೆ ಈ ಬೃಹತ್‌ ಕ್ರೀಡಾಕೂಟ ನಡೆಯಲಿದ್ದು, ಇಂದು ವರ್ಣರಂಜಿತ ಚಾಲನೆ ಸಿಗಲಿದೆ. ಭಾರತ ತಂಡವೂ ಹೆಚ್ಚಿನ ಪದಕಗಳ ನಿರೀಕ್ಷೆಯಲ್ಲಿದೆ.

ಅಂದಹಾಗೆ ಇಂಗ್ಲೆಂಡಿನ ಹೃದಯ ಎಂದೇ ಕರೆಯಲ್ಪಡುವ ಸುಂದರ ನಗರ ಬರ್ಮಿಂಗ್‌ಹ್ಯಾಮ್, ಈ ಬಾರಿಯ ಕ್ರೀಡಾಕೂಟ ಆಯೋಜನೆಗೊಂಡಿದೆ.

ಕ್ರೀಡೆಗಳು ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. ಕ್ರೀಡಾಪಟುಗಳು ಪ್ರದರ್ಶನ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆ.