ಮೈಸೂರು, ಜುಲೈ 02, 2023 (www.justkannada.in): ಬಿಜೆಪಿಯಲ್ಲಿ ಮನೆಯೊಂದು 20 ಬಾಗಿಲು ಎಂಬತ ಪರಿಸ್ಥಿತಿ ಉಂಟಾಗಿದೆ. ನಿಮ್ಮ ಯೋಗ್ಯತೆಗೆ ಇನ್ನೂ ವಿಪಕ್ಷ ನಾಯಕನ ಆಯ್ಕೆ ಮಾಡುವುದಕ್ಕೆ ಆಗಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ನಿಮ್ಮಲ್ಲೇ ಪರಸ್ಪರ ಕಿತ್ತಾಟದಿಂದ ಹೊರಬನ್ನಿ. ನೀವು ಕಾಂಗ್ರೆಸ್ ಸರ್ಕಾರದ ವಿರುದ್ಧ ಧರಣಿ ಕೂರಲು ಯಾವುದೇ ನೈತಿಕತೆ ಇಲ್ಲ. ಯಡಿಯೂರಪ್ಪ ಅವರನ್ನ ಗನ್ ಪಾಯಿಂಟ್ ನಲ್ಲಿಟ್ಟು ಧರಣಿ ಮಾಡಲು ಹೈಕಮಾಂಡ್ ಸೂಚಿಸಿದೆ ಅನ್ಸುತ್ತೆ. ಅದಕ್ಕೆ ಅವರು ಧರಣಿ ಮಾಡಲು ಮುಂದಾಗಿದ್ದಾರೆ. ಅವರ ಮಗನಿಗೆ ಏನಾದರೂ ಒಂದು ಪೋಸ್ಟ್ ಕೊಡಿಸಲು ಧರಣಿ ಮಾಡುತ್ತಿಬೇಕು ಎಂದು ಟೀಕಿಸಿದರು.
ಬಿಜೆಪಿ ಸರ್ಕಾರದಲ್ಲಿ ದುಡ್ಡು ಕೊಟ್ಟು ಡಿಸಿ ಗಳ ವರ್ಗಾವಣೆ ನಡೆಯುತ್ತಿತ್ತು. ಈಗ ಜಿಲ್ಲಾಧಿಕಾರಿಗಳ ವರ್ಗಾವಣೆ ಸುಲಲಿತವಾಗಿ ನಡೆಯಿತ್ತಿದೆ. ಹಿಂದೆ ವರ್ಗಾವಣೆ ದಂದೆ ನಡೆಯುತ್ತಿತ್ತು. ಅದಕ್ಕೆ ಈಗ ಬ್ರೇಕ್ ಬಿದ್ದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂದೆ ನಡೆಯಲ್ಲ ಎಂದು ಹೇಳಿದರು.
ಜನರಿಗೆ ಸ್ಪಂದಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಅಧಿಕಾರಿಗಳು ಹಾಗೆ ನಡೆದುಕೊಳ್ಳಬೇಕು. ಬಿಜೆಪಿ ಸರ್ಕಾರದ ಗುಂಗಿನಿಂದ ಅಧಿಕಾರಿಗಳು ಹೊರಬರಬೇಕು ಎಂದು ಅಧಿಕಾರಿ ವರ್ಗಕ್ಕೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಎಚ್ಚರಿಕೆ ನೀಡಿದರು.