ಮೈಸೂರು,ಮೇ,6,2019(www.justkannada.in): ಮೈಸೂರಿನಲ್ಲಿರುವ ಲಿಂಗಾಬುದ್ದಿ ಕೆರೆಯನ್ನ ದುರಸ್ತಿಗೊಳಿಸಿ ಅಭಿವೃದ್ದಿಪಡಿಸುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಚಿವ ಜಿ.ಟಿ ದೇವೇಗೌಡ, ಲಿಂಗಬುದ್ದಿ ಕೆರೆಯೂ ನೂರಾರು ಜೀವರಾಶಿಗಳ ಆಶ್ರಯ ತಾಣವಾಗಿದೆ. ಸುತ್ತಮುತ್ತಲ ಪ್ರದೇಶಗಳ ನೈಸರ್ಗಿಕ ಸಮತೋಲನ ಕಾಪಾಡುವಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಅದರ ಪಾತ್ರ ಹೆಚ್ಚಿದೆ. ಆದರೆ ಕೆರೆಯ ನಿರ್ವಹಣೆಯ ಕೊರತೆಯಿಂದಾಗಿ ಕೆರೆಯೂ ಬತ್ತಿ ಹೋಗಿದ್ದು, ವಿನಾಶದ ಅಂಚಿನಲ್ಲಿದೆ.
ಹೀಗಾಗಿ ಲಿಂಗಾಬುದ್ದಿ ಕೆರೆಯ ಹೂಳೆತ್ತಿ ನೀರು ಸಂಗ್ರಹವಾಗುವಂತೆ ಮಾಡಿ ಕೆರೆಯನ್ನ ಅಭಿವೃದ್ದಿ ಪಡಿಸಬೇಕು ಎಂದು ಮೈಸೂರು ವಿಶ್ವ ವಿದ್ಯಾನಿಲಯ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನಾಣಯ್ಯನವರು ಮನವಿ ಸಲ್ಲಿಸಿದ್ದಾರೆ. ಈ ಮನವಿ ಪತ್ರವನ್ನು ಲಗತ್ತಿಸಲಾಗಿದೆ. ಈ ಮನವಿಯನ್ನ ಪರಿಗಣಿಸಿ ಕೆರೆಯನ್ನ ಅಭಿವೃದ್ದಿಗೊಳಿಸಬೇಕು. ಮತ್ತು ಅಭಿವೃದ್ದಿಗೊಳಿಸಲು ಕೈಗೊಂಡ ಕ್ರಮದ ಬಗ್ಗೆ ನನ್ನ ಕಚೇರಿಗೆ ಮತ್ತು ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಚಿವ ಜಿ.ಟಿ ದೇವೇಗೌಡರು ಸೂಚಿಸಿದ್ದಾರೆ.
Key words: A letter –DC-minister- GT Deve Gowda improve –lingabuddilake -Mysore.