ಬೆಂಗಳೂರು, ಮೇ 03, 2020 (www.justkannada.in): ಮೇ 4ರ ನಂತರದ ಲಾಕ್ ಡೌನ್ ಮದುವೆ ಸಮಾರಂಭಕ್ಕೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
ಮಾರ್ಗಸೂಚಿಗೆ ಸ್ವಲ್ಪ ಬದಲಾವಣೆ ಮಾಡಿರುವ ಕೇಂದ್ರ ಸರಕಾರ, ಮದುವೆ ಸಮಾರಂಭಕ್ಕೆ ಭಾಗವಹಿಸುವವರ ಸಂಖ್ಯೆಯನ್ನು ಈಗಿರುವ ಮಿತಿಗಿಂತ ಹೆಚ್ಚಿಸಿದೆ. ಆದರೆ, ಇದು ಕಂಟೇನ್ಮೆಂಟ್ ವಲಯಕ್ಕೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಸಮಾರಂಭಗಳಲ್ಲಿ ಅಂತರ ಕಾಪಾಡಿಕೊಂಡು ಬರುವುದು ಮತ್ತು ಮಾಸ್ಕ್ ಧರಿಸುವುದನ್ನು ಖಡ್ಡಾಯ ಮಾಡಿರುವ ಕೇಂದ್ರ ಸರಕಾರ, ಐವತ್ತು ಜನರು , ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಹೇಳಿದೆ.
ಐವತ್ತು ಜನರಿಗೆ ಸೀಮಿತಗೊಳಿಸಿ ಮದುವೆ ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದರೂ, ಜಿಲ್ಲಾಡಳಿತ/ಸಂಬಂಧ ಪಟ್ಟ ಪೊಲೀಸ್ ಠಾಣೆಗೆ, ಮುಂಚಿತವಾಗಿ ಮಾಹಿತಿ ನೀಡಿ ಅನುಮತಿ ಪಡೆಯಬೇಕಾಗಿದೆ.