A.R. Rahman: ಇಂದಿನಿಂದ Book My Show ಮೂಲಕ ಮುಂಗಡ ಟಿಕೆಟ್‌ ಮಾರಾಟ ಆರಂಭ.

In the 2024 Mysuru Yuva Dasara, A.R. Rahman is set to perform on October 9 at the Uthanahalli Grounds, marking one of the most awaited events of the festival. Rahman’s performance is part of a larger musical lineup that includes iconic musicians such as Ilaiyaraaja (performing on October 10), Shreya Ghoshal (on October 6), and Badshah (on October 8). The Yuva Dasara event, running from October 6 to 10, will feature a blend of Bollywood, Tamil, and Kannada artists, though some controversy has arisen over the perceived underrepresentation of Kannada performers.

In the 2024 Mysuru Yuva Dasara, A.R. Rahman is set to perform on October 9 at the Uthanahalli Grounds, marking one of the most awaited events of the festival

ಮೈಸೂರು, ಸೆ.30,2024: 2024ರ ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ಸಂಜೆಗೆ ಮುಂಗಡ ಟಿಕೆಟ್‌ ಗಳ ಮಾರಾಟ ಇಂದಿನಿಂದ ಆರಂಭ.

ಅಕ್ಟೋಬರ್ 9 ರಂದು ಉತ್ತನಹಳ್ಳಿ ಮೈದಾನದಲ್ಲಿ ರೆಹಮಾನ್‌ ಮತ್ತು ತಂಡದ ಸಂಗೀತ ಸಂಜೆ ಸಮಾರಂಭ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಬುಕ್‌ ಮೈ ಶೋ ಆಪ್‌ (Book My Show App) ಮೂಲಕ ಮುಂಗಡ ಟಿಕೆಟ್‌ ಮಾರಾಟ ಆರಂಭ.

ಈ ಬಗ್ಗೆ “ಜಸ್ಟ್‌ ಕನ್ನಡ” ಗೆ ಮಾಹಿತಿ ನೀಡಿದ ದಸರಾ ಸಮಿತಿ ಮುಖ್ಯಸ್ಥರು ಆದ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ,  ಈ ವರ್ಷದ ಯುವ ದಸರಾ ಕಾರ್ಯಕ್ರಮವು ಅಕ್ಟೋಬರ್ 6 ರಿಂದ 10ರವರೆಗೆ ನಡೆಯಲಿದ್ದು, ಇಳಯರಾಜಾ (ಅಕ್ಟೋಬರ್ 10), ಶ್ರೇಯ ಘೋಷಾಲ್ (ಅಕ್ಟೋಬರ್ 6),  ರವಿ ಬಸ್ರೂರ್‌ ( ಅಕ್ಟೋಬರ್ ೭ )ಹಾಗೂ ಬಾದ್‌ಷಾ (ಅಕ್ಟೋಬರ್ 8) ಮುಂತಾದ ಕಲಾವಿದರು ತಮ್ಮ ಪ್ರದರ್ಶನದಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈಗಾಗಲೇ ಈ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭಗೊಂಡಿದೆ. ಎ.ಆರ್.‌ ರೆಹಮಾನ್‌ ಅವರ ಕಾರ್ಯಕ್ರಮದ ಟಿಕೆಟ್‌ ಗಳನ್ನು ಎಕ್ಸ್‌ ಕ್ಲೂಸಿವ್‌ ಆಗಿ ಬಿಡುಗಡೆ ಮಾಡಲು ಉದ್ದೇಶಿಸಿದ್ದ ಕಾರಣ, ಇಂದಿನಿಂದ ಬುಕ್‌ ಮೈ ಶೋ ನಲ್ಲಿ ಟಿಕೆಟ್‌ ಮಾರಾಟಗೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ 1 ಲಕ್ಷ ಜನರು ಉಚಿತವಾಗಿ ಭಾಗವಹಿಸಬಹುದಾಗಿದೆ, ಜತೆಗೆ  ವಿಶೇಷ VIP ಆಸನ ವ್ಯವಸ್ಥೆಯನ್ನು ಈ ವರ್ಷದಿಂದ ಪ್ರಥಮ ಬಾರಿಗೆ ಪರಿಚಯಿಸಲಾಗಿದೆ, ಪ್ರೀಮಿಯಂ ಆಸನಗಳಿಗೆ ಟಿಕೆಟ್‌ಗಳು ರೂ. 8,000 ಮತ್ತು ರೂ. 5,000 ದರದಲ್ಲಿವೆ ಎಂದರು.

key words: 2024 Mysuru Yuva Dasara, A.R. Rahman, Uthanahalli Grounds, book my show

SUMMARY:

In the 2024 Mysuru Yuva Dasara, A.R. Rahman is set to perform on October 9 at the Uthanahalli Grounds, marking one of the most awaited events of the festival. Rahman’s performance is part of a larger musical lineup that includes iconic musicians such as Ilaiyaraaja (performing on October 10), Shreya Ghoshal (on October 6), and Badshah (on October 8). The Yuva Dasara event, running from October 6 to 10, will feature a blend of Bollywood, Tamil, and Kannada artists, though some controversy has arisen over the perceived underrepresentation of Kannada performers.

While the event is free for up to one lakh attendees, VIP seating is available at premium prices, marking the first time such tickets have been introduced for Yuva Dasara.