ಕೊಹ್ಲಿ ಟ್ವಿಟ್ಟರ್ ಪೋಸ್ಟ್, ಎಬಿಡಿ ಕಾಮೆಂಟ್ ನೋಡಿ ಖುಷಿಯಾದ ಆರ್’ಸಿಬಿ ಫ್ಯಾನ್ಸ್

ಬೆಂಗಳೂರು, ಮಾರ್ಚ್ 30, 2021 (www.justkannada.in): ಐಪಿಎಲ್ ದಿನಗಣನೆ ಆರಂಭವಾಗಿದ್ದು, ಇದಕ್ಕಾಗಿ ಕೊಹ್ಲಿ ತಯಾರಿಯಲ್ಲಿದ್ದಾರೆ.

ವಿಶ್ರಾಂತಿಯ ದಿನಗಳೇ ಇಲ್ಲ. ಇಲ್ಲಿಂದ ಐಪಿಎಲ್ ಕಡೆ ಓಡಬೇಕು ಎಂದು  ಕೊಹ್ಲಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಜಿಮ್ ನಲ್ಲಿ ಓಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಕೊಹ್ಲಿ ಮೇಲಿನಂತೆ ಬರೆದುಕೊಂಡಿದ್ದಾರೆ.

ಡೀವಿಲಿಯರ್ಸ್ ಕಾಮೆಂಟ್

ಈ ಟ್ವೀಟ್ ಗೆ ಡೀವಿಲಿಯರ್ಸ್ ಕೂಡ ಕಾಮೆಂಟ್ ಮಾಡಿದ್ದಾರೆ. ನಾನು ಕೂಡ ನಿಮ್ಮ ಜೊತೆ ಟೀಮ್ ಸೇರಿಕೊಳ್ಳಲು ಪ್ಯಾಕ್ ಮಾಡಿಕೊಂಡಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಕೊಹ್ಲಿ ಪೋಸ್ಟ್ ಗೆ ಕಾಮೆಂಟ್ ಬರೆದಿದ್ದಾರೆ.
ಈ ಟ್ವೀಟ್ ಗಳನ್ನು ಕಂಡು ಆರ್ ಸಿಬಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.