ಮೈಸೂರು,ಫೆಬ್ರವರಿ,13,2025 (www.justkannada.in): ಉದಯಗಿರಿ ಪೋಲಿಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಅವಹೇಳನಕಾರಿ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ಬಹಳ ಖಂಡನೀಯ. ಪೊಲೀಸರು ಆರೋಪಿ ವಿರುದ್ದ ಎಫ್ ಐಆರ್ ದಾಖಲು ಮಾಡಲು ವಿಳಂಬ ಮಾಡಿದ್ದೇ ಘಟನೆಗೆ ಕಾರಣವಾಯಿತು ಎಂದು ಎಸ್ ಡಿಪಿಐ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದರು.
ಪ್ರಕರಣ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಬ್ದುಲ್ ಮಜೀದ್, ಅವಹೇಳನಕಾರಿ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಆರೋಪಿಯನ್ನ ಬಂಧಿಸಬೇಕು ಎಂದು ಪ್ರತಿಭಟನೆ ನಡೆಯುತ್ತೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನ ಕದಡುವ ಕೆಲಸವನ್ನ ಹಿಂದಿನಿಂದಲೂ ಈ ಆರ್.ಎಸ್.ಎಸ್ ಎಸ್ ಕಾರ್ಯಕರ್ತರು ಮಾಡುತ್ತಾರೆ. ಬೆಳಗ್ಗೆ 10.30 ಕ್ಕೆ ಆರೋಪಿಯನ್ನ ಬಂಧಿಸಿ ತಕ್ಷಣ ಕಾನೂನು ಪ್ರಕ್ರಿಯೆ ಮುಗಿಸಿ ಜೈಲಿಗೆ ಕಳುಹಿಸಬೇಕಿತ್ತು. ಆದರೆ ಸಂಜೆ ಆದರೂ ಎಫ್ಐಆರ್ ದಾಖಲು ಮಾಡಲು ಪೋಲಿಸರು ವಿಳಂಬ ಮಾಡಿದ್ದು ಗಲಭೆಗೆ ಕಾರಣವಾಗಿದೆ. ನಾವು ಅಂದು ಪ್ರಕ್ಷುಬ್ಧ ವಾತಾವರಣ ತಿಳಿ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದವು. ತಡರಾತ್ರಿವರೆಗೂ ನಾವು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಮಾಧಾನ ಪಡಿಸುವ ಮೂಲಕ ಪ್ರಯತ್ನ ಮಾಡಿದ್ದೇವೆ. ಜವಾಬ್ದಾರಿಯುತ ನಾಯಕರಾಗಿ ತಕ್ಷಣಕ್ಕೆ ನಾವು ಶಾಂತಿಯನ್ನು ಕಾಪಾಡುವುದು ನಮ್ಮ ನಾಯಕರ ಮೇಲಿದೆ. ಅದನ್ನ ನಾವು ಸರಿಯಾಗಿ ನಿರ್ವಹಿಸಿದ್ದೇವೆ. ಪೋಲಿಸರು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ. ಇದಕ್ಕಾಗಿ ಪೋಲಿಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪ್ರವಾದಿ ನಿಂದನೆ ಎನ್ನುವುದು ಬಹಳ ಸೂಕ್ಷ್ಮ ವಿಚಾರ. ಮುಸಲ್ಮಾನರಲ್ಲಿ ತಮ್ಮ ತಂದೆ ತಾಯಿ, ಮಕ್ಕಳಿಗಿಂತಲೂ ಪ್ರವಾದಿ ಮುಹಮ್ಮದರ ಮೇಲೆ ಅಪಾರ ಪ್ರೀತಿ, ಗೌರವ ಇಟ್ಟುಕೊಂಡಿದ್ದಾರೆ. ಪೋಲಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ಕ್ರಮ ವಹಿಸಬೇಕಿತ್ತು. ಕೆಲವು ಬಿಜೆಪಿ ನಾಯಕರು ಶಾಂತಿ ಕದುಡುವ ಕೆಲಸವನ್ನ ಮಾಡಿದ್ದಾರೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದರು. ಈ ರೀತಿ ಮಾಡಬಾರದು ಎಂದು ಅಬ್ದುಲ್ ಮಜೀದ್ ಹೇಳಿದರು.
ಪ್ರತಾಪ್ ಸಿಂಹ ಇನ್ನೊಬ್ಬರಿಗೆ ಬುದ್ದಿ ಹೇಳುವ ನೈತಿಕತೆ ಇಲ್ಲ
ಪ್ರತಾಪ್ ಸಿಂಹ ಇನ್ನೊಬ್ಬರಿಗೆ ಬುದ್ದಿ ಹೇಳುವ ನೈತಿಕತೆ ಇಲ್ಲ. ಘಟನೆಗೆ ಮೂಲ ಕಾರಣ ನಿಮ್ಮ ಕಾರ್ಯಕರ್ತ. ನಿಮ್ಮ ಸಂಬಂಧಿಕ ಎಂದೂ ಕೂಡ ಮಾಹಿತಿ ಇದೆ. ಈ ಪೋಸ್ಟ್ ಹಾಕಿದ್ದವನ ಹಿನ್ನೆಲೆ ಏನು. ಇದರ ಹಿಂದೆ ಯಾರಿದ್ದಾರೆ, ಪೂರ್ವ ನಿಯೋಜಿತವಾ? ಎಂದು ತನಿಖೆ ನಡೆಯಬೇಕಿದೆ. ಎಸ್ ಡಿಪಿಐ ಕಾರ್ಯಕರ್ತರ ಮೇಲೆ ಕೆಲವು ಆರೋಪಗಳು ಕೇಳಿ ಬಂದಿದೆ. ಪ್ರಕರಣದಲ್ಲಿ ಎಸ್ ಡಿಪಿಐ ಕಾರ್ಯಕರ್ತರ ಪಾತ್ರ ಇಲ್ಲ. ಆದರೆ ಮಾಧ್ಯಮಗಳಲ್ಲಿ ತಪ್ಪಾಗಿ ಪ್ರಸಾರವಾಗಿದೆ. ತಪ್ಪಿತಸ್ಥರಿಗೆ ಕಾನೂನು ಕ್ರಮ ಆಗಲಿ. ಆದರೆ ಒಬ್ಬನೇ ಒಬ್ಬ ಅಮಾಯಕರಿಗೆ ಅನ್ಯಾಯ ಆಗಬಾರದು ಎಂದು ಅಬ್ದುಲ್ ಮಜೀದ್ ತಿಳಿಸಿದರು.
Key words: Stone pelting, Udayagiri, police station, Abdul Majeed