ಬೆಂಗಳೂರು, ಸೆಪ್ಟೆಂಬರ್ 08, 2021 (www.justkannada.in): ವೇಗದ ಬೌಲರ್, ಕನ್ನಡಿಗ ಅಭಿಮನ್ಯು ಮಿಥುನ್ ಪ್ರಥಮ ದರ್ಜೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಿಥುನ್ ಮಾಹಿತಿ ಹಂಚಿಕೊಂಡಿದ್ದಾರೆ, ನಾನು ನನ್ನ ದೇಶಕ್ಕಾಗಿ ಆಡಿರುವುದು ನನಗೆ ತುಂಬಾ ಸಂತೋಷ ನೀಡಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಬಿಸಿಸಿಐಗೆ ಮತ್ತು ನನ್ನ ಕ್ರಿಕೆಟ್ ಜೀವನವನ್ನು ರೂಪಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.
ಮಿಥುನ್ ಒಟ್ಟು 103 ಪ್ರಥಮ ದರ್ಜೆ ಪಂದ್ಯಗಳಿಂದ 338 ವಿಕೆಟ್, 96 ಲಿಸ್ಟ್ ಎ ಪಂದ್ಯಗಳಿಂದ 136 ವಿಕೆಟ್ ಮತ್ತು 74 ಟಿ20 ಪಂದ್ಯಗಳಿಂದ 69 ವಿಕೆಟ್ ಪಡೆದಿದ್ದಾರೆ. 2010 ಮತ್ತು 2011ನೇ ಸಾಲಿನಲ್ಲಿ ಭಾರತ ತಂಡದ ಪರ 4 ಟೆಸ್ಟ್ ಪಂದ್ಯಗಳಲ್ಲಿ 9 ವಿಕೆಟ್ ಮತ್ತು 5 ಏಕದಿನ ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ.