50:50 ಅನುಪಾತ ರದ್ದು ಮಾಡಿ ಎನ್ನಲ್ಲ: ಅಕ್ರಮ ಸೈಟ್ ವಾಪಸ್ ಪಡೆಯಿರಿ – ಶಾಸಕ ಜಿ.ಟಿ ದೇವೇಗೌಡ

ಮೈಸೂರು,ನವೆಂಬರ್,7,2024 (www.justkannada.in):  ಮುಡಾದಲ್ಲಿನ 50:50 ಅನುಪಾತದ ಅಕ್ರಮ ಸೈಟ್ ಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮುಡಾ ಸಭೆಗೂ ಮುನ್ನ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, 50: 50 ಅನುಪಾತ ರದ್ದು ಮಾಡಿ ಅಂತಾ ನಾನು ಹೇಳಲ್ಲ.  ಆದರೆ ಮುಡಾ 50: 50 ಅಕ್ರಮ ಸೈಟ್ ಗಳನ್ನ ವಾಪಸ್ ಪಡೆಯಬೇಕು.  ಅಕ್ರಮವಾಗಿ ನೀಡಿರುವ ನಿವೇಶನಗಳನ್ನ ವಾಪಸ್ ಪಡೆಯಲಿ ಎಂದು ಹೇಳಿದರು.

50: 50 ಅನುಪಾತದಲ್ಲಿ ಅಕ್ರಮವಾಗಿ ನೀಡಿರುವ ಸೈಟ್ ರದ್ದು ಪಡಿಸಬೇಕು.  ಮುಡಾ 50: 50 ಅನುಪಾತ ರದ್ದು ಮಾಡಿ ಎಂದು ಹೇಳಲ್ಲ. 50:50 ಅನುಪಾತದಡಿ  ಸೈಟ್ ನೀಡಬೇಕು ಎಂದು ಶಾಸಕ ಜಿಟಿ ದೇವೇಗೌಡ ತಿಳಿಸಿದರು.

Key words: Abolish, illegal site, MUDA, MLA, GT Deve Gowda