ಬೆಂಗಳೂರು,ಡಿಸೆಂಬರ್,18,2020(www.justkannada.in) : ಮೈಸೂರು, ಹಾಸನ ಮತ್ತು ಬೆಳಗಾವಿ ಜಿಲ್ಲಾದ್ಯಂತ 13 ಸ್ಥಳಗಳಲ್ಲಿ ವಿವಿಧ ಎಸಿಬಿ ತಂಡಗಳಿಂದ ಭ್ರಷ್ಟಾಚಾರ ಆರೋಪಿತ 3 ಅಧಿಕಾರಿಗಳ ವಿರುದ್ಧ ಶುಕ್ರವಾರ ದಾಳಿ ನಡೆಸಲಾಗಿದೆ.ಮೈಸೂರು, ಹಾಸನ ಮತ್ತು ಬೆಳಗಾವಿ ಜಿಲ್ಲೆಗಳ ಮೂರು ಸರ್ಕಾರಿ ನೌಕರರ ಕುರಿತಂತೆ ಹೆಚ್ಚು ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿಗಳಿಕೆ ಪ್ರಕರಣವನ್ನು ದಾಖಲಿಸಿ ಈ ಅಧಿಕಾರಿಗಳಿಗೆ ಸಂಬಂಧಿಸಿದ 13 ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ.
ಮೈಸೂರಿನ ಅಶೋಕನಗರ ಅರಣ್ಯ ಭವನ ಶ್ರೀಗಂಧ ಕೋಟಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರಸ್ವಾಮಿ ಅವರಿಗೆ ಸೇರಿದ ಚಾಮುಂಡಿ ವಿಹಾರ ಲೇಔಟ್ ನಲ್ಲಿರುವ ವಾಸದ ಮನೆ ಹಾಗೂ ಮಾನವ ಹೆಸರಿನಲ್ಲಿರುವ ಸರಸ್ವತಿಪುರಂ ವಾಸದ ಮನೆ ಹಾಗೂ ತಂದೆಯವರು ವಾಸವಾಗಿರುವ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು ಮೂಗನೂರು ಗ್ರಾಮದಲ್ಲಿನ ವಾಸದ ಮನೆ ಹಾಗೂ ಸ್ನೇಹಿತ ವಾಸವಿರುವ ಕೆ.ಸಿ.ಬಡಾವಣೆಯಲ್ಲಿರುವ ಮನೆ ಮತ್ತು ಕರ್ತವ್ಯ ನಿರ್ವಹಿಸುತ್ತಿರುವು ಶ್ರೀಗಂಧ ಕೋಟಿ ಅರಣ್ಯ ಭವನ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ.
ಹಾಸನದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಸಹಾಯಕ ಎಂಜಿನಿಯರ್ ಅಶ್ವಿನಿ ವಿ.ಎನ್ ಅವರಿಗೆ ಸೇರಿದ ಹಾಸನದ ಕೆಂಪೇಗೌಡ ಮುಖ್ಯ ರಸ್ತೆ, ಉದಯಗಿರಿಯಲ್ಲಿರುವ ವಾಸದ ಮನೆ ಹಾಗೂ ಇವರ ತಂದೆಯವರು ವಾಸವಾಗಿರುವ ವಿದ್ಯಾನಗರ ವಾಸದ ಮನೆ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ.
ಬೆಳಗಾವಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪ ವಿಭಾಗ-1ರ ಸಹಾಯಕ ಅಭಿಯಂತರ ಮನೋಜ್ ಸುರೇಶ್ ಕವಳೇಕರ ಅವರಿಗೆ ಸೇರಿದ ಬೆಳಗಾವಿಯ ಆಯೋದ್ಯನಗರದಲ್ಲಿರುವ ವಾಸದ ಮನೆ, ಖಾನಪೂರ ತಾಲೂಕಿನ ಸಂಗರಗಾಳಿ ಗ್ರಾಂದ ಫಾರ್ಮ್ ಹೌಸ್ ಹಾಗೂ ಇವರ ಸಹೋದರಿ ವಾಸವಾಗಿರುವ ಆಯೋದ್ಯನಗರದ ವಾಸದ ಮನೆ ಹಾಗೂ ಇನ್ನೊಬ್ಬ ಸಹೋದರಿ ವಾಸವಾಗಿರುವ ಮಹಾದ್ವಾರ ರಸ್ತೆಯಲ್ಲಿರುವ ವಾಸದ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ವಿವಿಧ ತಂಡಗಳಿಂದ ಮೇಲ್ಕಂಡ ಆರೋಪಿತ ಸರ್ಕಾರಿ ನೌಕರರ ವಿರುದ್ಧ ದಾಳಿ ಮುಂದುವರೆದಿದ್ದು, ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
key words : ACB’s-shock-corrupt-officials-Mysore-Hassan-Belgaum-ACB-attack-3 locations