ಚಾಮರಾಜನಗರ,ಮಾರ್ಚ್,23,2025 (www.justkannada.in): ಬೈಕ್ ಗೆ ಈಚರ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಚಾಮರಾಜನಗರದ ಹರದನಹಳ್ಳಿ ಗ್ರಾಮದ ಬಳಿ ನಡೆದಿದೆ.
ಬ್ಯಾಡಮೂಡ್ಲು ಗ್ರಾಮದ ಅಭಿ(22), ಅಭಿಷೇಕ್ (24) ಮೃತಪಟ್ಟ ಯುವಕರು. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಗಂಭೀರ ಗಾಯಗೊಂಡ ಮಾದೇಶ್ ಎಂಬಾತನನ್ನು ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬಾಳೆಗೊನೆ ಕಡಿಯುವ ಕೆಲಸಗಾರರು ಇವರಾಗಿದ್ದು ಕೆಲಸ ಮುಗಿಸಿ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Key words: Chamarajanagar, Accident, Two youths, die,