ಮೈಸೂರು, ಏ.೦೧,೨೦೨೫: ನಗರದ ಹಿನಕಲ್ ಬಳಿಯ ರಿಂಗ್‌ರಸ್ತೆಯಲ್ಲಿ ಸೋಮವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎರಡು ವರ್ಷದ ಮಗು ಮೃತಪಟ್ಟಿದೆ.
ಬೆಂಗಳೂರಿನ ನರೇಶ್ ಎಂಬುವರ ಕಾರು ಪಲ್ಟಿಯಾಗಿ, ಅವರ ಪುತ್ರಿ ಮೈಥಿಲಿ (2) ಮೃತಪಟ್ಟಳು.
ಘಟನೆ ಹಿನ್ನೆಲೆ:
ಉಡುಪಿಯ ನರೇಶ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಯುಗಾದಿ ರಜೆ ಕಾರಣ ಕುಟುಂಬದೊಂದಿಗೆ ಕೇರಳದ ವಯನಾಡ್ ಪ್ರವಾಸಕ್ಕೆ ಹೋಗಿದ್ದರು. ಪ್ರವಾಸ ಮುಗಿಸಿಕೊಂಡು ಸೋಮವಾರ ಸಂಜೆ ಬೆಂಗಳೂರಿಗೆ ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ.
ಮೈಸೂರಿನ ಹೊರ ವರ್ತುಲ ರಸ್ತೆ, ವಿಜಯನಗರ ಬಳಿ ಕಾರು ನಿಯಂತ್ರಣ ತಪ್ಪಿರಸ್ತೆ ವಿಭಜಕದಲ್ಲಿನ ವಿದ್ಯುತ್ ಕಂಬಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಕಂಬಕ್ಕೆ ಗುದ್ದಿದ ರಭಸಕ್ಕೆ ಕಾರು ಪಲ್ಟಿಯಾಗಿದೆ. ಈ ವೇಳೆ ಕಾರಿನಲ್ಲಿ ನರೇಶ್ ಅವರೊಂದಿಗೆ ಪತ್ನಿ ಸಂಧ್ಯಾ, ಸಂದೇಶ್, ಲಿಖಿತಾ, ಮನೋರಮಾ ಇದ್ದರು. ಕಾರಲ್ಲಿದ್ದವರಿಗೆ ಗಾಯ ವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ.
ಆದರೆ ಎರಡು ವರ್ಷದ ಮಗಳು ಮೈಥಿಲಿಗೆ ಘಟನೆಯಿಂದ ತೀವ್ರ ಪೆಟ್ಟಾದ ಕಾರಣ ಅಸುನೀಗಿದಳು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂದ ವಿ.ವಿ.ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
key words: girl dies, car hits electric pole, Mysore Ring Road, Accident
SUMMARY:
Two-year-old girl dies after car hits electric pole in Mysore Ring Road . A two-year-old child was killed in a road accident on the Ring Road near Hinkal in the city on Monday evening. Naresh’s daughter Maithili (2) had died when car overturned.