ಮೈಸೂರು,ಏಪ್ರಿಲ್,1,2025 (www.justkannada.in): ಕಾರು-ಟಿಟಿ ವಾಹನ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸಾವನ್ನಪ್ಪಿರುವ ಘಟನೆ ಮೈಸೂರು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ ಬೆಂಡಗಳ್ಳಿ ಗೇಟ್ ಬಳಿ ನಡೆದಿದೆ.
ಕೇರಳ ಮೂಲದ ಶಾಷಿದ್ (30), ಮುಷ್ಕಾನ್ (19) ಮೃತಪಟ್ಟವರು. ಕಾರು ಮತ್ತು ಟಿಟಿ ವಾಹನದಲ್ಲಿದ್ದ ಹಲವರಿಗೆ ಗಾಯಳಾಗಿವೆ. ಶಾಜೀಯಾ ಎಂಬುವರಿಗೆ ಗಂಭೀರ ಗಾಯಗಳಾಗಿದ್ದರೇ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯವಾಗಿದೆ. ಟಿಟಿಯಲ್ಲಿ ತೆರಳುತ್ತಿದ್ದ ಚಾಲಕ ಸೇರಿ ಸುಮಾರು 5-6 ಮಂದಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕೇರಳ ಮೂಲದ ಒಂದೇ ಕುಟುಂಬದ 8 ಮಂದಿ ಮಕ್ಕಳೊಡನೆ ಪ್ರಯಾಣಿಸುತ್ತಿದ್ದ ಕಾರಿಗೆ ಟಿಟಿ ವಾಹನ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಬೇಗೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: Accident, between, car, TT vehicle, Two dead