ಕುಂಭಮೇಳದಿಂದ ವಾಪಾಸ್ ಆಗುವಾಗ ಭೀಕರ ಅಪಘಾತ:  ನಾಲ್ವರು ಕನ್ನಡಿಗರು ಸಾವು

ಇಂದೋರ್,ಫೆಬ್ರವರಿ,7,2025 (www.justkannada.in): ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದ ವಾಪಸ್ ಬರುವಾಗ ಸರಣಿ ಅಪಘಾತದಲ್ಲಿ ನಾಲ್ವರು ಕನ್ನಡಿಗರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಬೆಳಗಾವಿ ಮೂಲದ ನಾಲ್ವರು ಸೇರಿ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ. ಬೆಳಗಾವಿಯ ಶಹಾಪುರ ನಿವಾಸಿ ಸಾಗರ್, ಗಣೇಶಪುರ ನಿವಾಸಿ ನಿತಿಪಾಟೀಲ್,   ಸಂಗೀತ ಜ್ಯೋತಿ ಎಂಬುವವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ 15 ಜನರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಟಿ ವಾಹನದಲ್ಲಿ 19 ಮಂದಿ ವಾಪಸಾಗುತ್ತಿದ್ದರು ಆಗ ಲಾರಿಗೆ ವಾಹನ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

. ಅಪಘಾತಕ್ಕೀಡಾದ ಟೆಂಪೋ ಟ್ರಾವೆಲರ್‌ ನಲ್ಲಿದ್ದ ಪ್ರಯಾಣಿಕರು ಕರ್ನಾಟಕದ ನಿವಾಸಿಗಳು. ಮಾನ್ಪುರ ಭೈರವ ಘಾಟ್‌ನಲ್ಲಿ ಬೆಳಗಿನ ಜಾವ 2.30 ರ ಸುಮಾರಿಗೆ ಮುಂದೆ ಚಲಿಸುತ್ತಿದ್ದ ಟ್ಯಾಂಕರ್‌ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದ 19 ಯಾತ್ರಿಕರು ಟಿಟಿ ವಾಹನದಲ್ಲಿ ವಾಪಾಸ್ ಆಗುತ್ತಿದ್ದರು.  ಈ ವೇಳೆ ಇಂದೋರ್ ಬಳಿ ಟಿಟಿ ವಾಹನ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೆಳಗಾವಿ ಮೂಲದ ನಾಲ್ವರು, ಇಂದೋರ್ ನ ಇಬ್ಬರು ಸೇರಿ 6 ಜನರು ಸಾವನ್ನಪ್ಪಿದ್ದಾರೆ.

Key words: Four, Kannadigas, die, accident, Kumbh Mela