ಭೀಕರ ಅಪಘಾತ: ಎರಡು ಬಸ್ ಗಳ ಮಧ್ಯೆ ಸಿಲುಕಿ ಆಟೋ ನಜ್ಜುಗುಜ್ಜು: ಇಬ್ಬರು ಸಾವು

ಬೆಂಗಳೂರು,ಫೆಬ್ರವರಿ,28,2025 (www.justkannada.in): ಆಟೋಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಆಟೋ ಚಾಲಕ ಮತ್ತು ಪ್ರಯಾಣಿಕ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಹನುಮಂತನಗರದ ಸೀತಾ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಆಟೋಚಾಲಕ ಅನಿಲ್ ಕುಮಾರ್ ಪ್ರಯಾಣಿಕ ವಿಷ್ಣು ಎಂಬುವವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಎರಡು ಬಿಎಂಟಿಸಿ ಬಸ್ ಗಳ ನಡುವೆ  ಆಟೋ ಸಿಕ್ಕಿ  ನಜ್ಜುಗುಜ್ಜಾಗಿದ್ದು ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬನಶಂಕರಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: accident, Auto, buses, Two dead