ಭೀಕರ ಅಪಘಾತ: ಒಂದೇ ಕುಟುಂಬದ ಐವರು ಸಾವು

ಯಾದಗಿರಿ, ಫೆಬ್ರವರಿ, 5,2025 (www.justkannada.in): ಬೈಕ್ ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬಳಿ ನಡೆದಿದೆ.

ಪತಿ ಅಂಜನೇಯ (35)  ಪತ್ನಿ ಗಂಗಮ್ಮ(28),  ಪುತ್ರ ಹನುಮಂತ(1), ಸಹೋದರನ ಮಕ್ಕಳಾದ ಪವಿತ್ರ (5) ರಾಯಪ್ಪ(3) ಮೃತಪಟ್ಟವರು. ಬೈಕ್ ನಲ್ಲಿ ಸುರಪುರದಿಂದ ತಿಂಥಣಿ ಕಡೆಗೆ ಹೊರಟ್ಟಿದ್ದ ವೇಳೆ ಎರಡು ಬೈಕ್​ಗೆ ಸಾರಿಗೆ ಬಸ್ ಡಿಕ್ಕಿಯಾಗಿದೆ ಎನ್ನಲಾಗಿದೆ. ಐವರು ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೇ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತರು ಯಾದಗಿರಿ ಜಿಲ್ಲೆ ಶಹಪುರ ಹಳಿಸಗರ ನಿವಾಸಿಗಳು ಎನ್ನಲಾಗಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

Key words: accident, Five, same family,  die