ಬೆಂಗಳೂರು,ಜನವರಿ,01,2021(www.justkannada.in) : ಶಿಕ್ಷಣ ಇಲಾಖೆಯ ರಾಷ್ಟ್ರೀಯ ಮಟ್ಟದ ಸ್ಪರ್ಧಾ ಪರೀಕ್ಷೆಗೆ ( National Talent Search Exination) ತೆರಳುತ್ತಿದ್ದಾಗ ಕೆಂಗೇರಿಯ ಬಳಿ ಕೆಎಸ್ಆರ್ಟಿಸಿ ಬಸ್ ಅಪಘಾತಕ್ಕೆ ತುತ್ತಾಗಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿರುವ ವಿದ್ಯಾರ್ಥಿನಿ ಯಶಸ್ವಿನಿಯನ್ನು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ ನೀಡಿ ಧೈರ್ಯತುಂಬಿದರು.
ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿ ಯೋಗಕ್ಷೇಮ ವಿಚಾರಿಸಿ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಚಿವ ಎಸ್.ಸುರೇಶ್ ಕುಮಾರ್ ಬೇಸರವ್ಯಕ್ತಪಡಿಸಿದ್ದಾರೆ.
NIMHANS ನಲ್ಲಿ ಕತ್ತು ಅಲುಗಾಡಿಸಲು ಆಗದಂತೆ ಮಲಗಿದ್ದ ಯಶಸ್ವಿನಿ ಯನ್ನು ಕಂಡು ಯಾರಿಗಾದರೂ ವೇದನೆ ಯಾಗುವುದು ಸಹಜ. ಕತ್ತಿನ ಬೆನ್ನುಮೂಳೆಯ ಎರಡು vertebrae ತೀವ್ರವಾಗಿ ಘಾಸಿಯಾಗಿವೆ. ತುರ್ತಾಗಿ ಆಕೆಗೆ ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿ ತಂದೆ ಸೆಕ್ಯುರಿಟಿ ನೌಕರ
ಇದೀಗ ಆಸ್ಪತ್ರೆಯ ನಿರ್ದೇಶಕರೊಂದಿಗೆ ಮಾತನಾಡಿ, ವಿವರಗಳನ್ನು ಪಡೆದು ಹಾಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲಾ ಚಿಕಿತ್ಸೆಗಳನ್ನೂ ನೀಡಬೇಕೆಂದು ಕೋರಿದ್ದೇನೆ. ನಗರದ ಪೊಲೀಸ್ ಜಂಟಿ ಆಯುಕ್ತರು ( ಸಂಚಾರಿ ಪೊಲೀಸ್) ರವರ ಜೊತೆಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲು ಕೋರಿದ್ದೇನೆ. ಅವರು ಬಾಲಕಿಯ ವಿವರ ಪಡೆದ ತಕ್ಷಣ ವೈಯಕ್ತಿಕವಾಗಿ ತಮ್ಮ ನೆರವು ನೀಡಲು ಮುಂದೆ ಬಂದರು. ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅದೇ ರೀತಿ KSRTC ವ್ಯವಸ್ಥಾಪಕ ನಿರ್ದೇಶಕರಿಗೆ ಮಾತನಾಡಿ, ಈ ಪ್ರಕರಣದಲ್ಲಿ ಇಲಾಖೆಯ ಕಡೆಯಿಂದ ಅಗತ್ಯ ಕ್ರಮ ಜರುಗಿಸಲು ಕೋರಿದ್ದೇನೆ. ನಮ್ಮ ಶಿಕ್ಷಣ ಇಲಾಖೆಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ಇಂದೇ ಸುಮಾರು ಒಂದು ಲಕ್ಷ ರೂಗಳನ್ನು ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
key words : Accident-Kengeri-Impaired-student-family-Comfort-said-Minister-Education-S.Suresh Kumar