ಮೈಸೂರು,ಡಿಸೆಂಬರ್,15,2021(www.justkannada.in): ಬಿಜೆಪಿಯ ಮೂಲಗಳ ಪ್ರಕಾರ ಫೆ.14ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬದಲಾಗೋದು ಪಕ್ಕ. ಒಬ್ಬ ಡಮ್ಮಿ ವ್ಯಕ್ತಿಯನ್ನ ಸಿಎಂ ಮಾಡಲಿದ್ದಾರೆ ಎಂದು ಸ್ಪೋಟಕ ಮಾಹಿತಿಯನ್ನ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತೆರೆದಿಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ರಾಜ್ಯದಲ್ಲಿ ಮೂರು ವ್ಯಕ್ತಿಯನ್ನ ಸಿಎಂ ಮಾಡುವ ಗುರಿಯನ್ನ ಬಿಜೆಪಿ ಹೊಂದಿದೆ. ನಮಗೆ ದೆಹಲಿಯಿಂದಲೇ ನಮಗೆ ಮಾಹಿತಿಗಳು ದೊರೆಯುತ್ತಿವೆ. ನಮಗೆ ಬಿಜೆಪಿಯವರ ಮಾಹಿತಿಯನ್ನ ಅದೇ ಪಕ್ಷದವರು ಬೇಡ ಅಂದ್ರು ಕೊಡ್ತಿದ್ದಾರೆ. ಬಿಜೆಪಿಯ ಮೂಲಗಳ ಪ್ರಕಾರ ಫೆ.14ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬದಲಾಗೋದು ಪಕ್ಕ. ಆ ಬಳಿಕ ರಾಜ್ಯಕ್ಕೆ ಬೇರೊಬ್ಬ ಮುಖ್ಯಮಂತ್ರಿ ಬರಲಿದ್ದಾರೆ. ಪೆಬ್ರವರಿ 14 ಡೆಡ್ ಲೈನ್ ಎಂದರು.
ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಎರಡೂ ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳು, ಕಾರ್ಯಕರ್ತರಿಗೆ ಸಲ್ಲಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ರಾಜ್ಯದ 25 ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಮತ ಪಡೆದಿದೆ. ಆಡಳಿತಾರೂಢ ಬಿಜೆಪಿಗಿಂತ ಕಾಂಗ್ರೆಸ್ ಪಕ್ಷ ಹೆಚ್ಚಿನ ಮತ ಪಡೆದಿದೆ. ಬಿಜೆಪಿಯವರು ನಾವು ಜಾತ್ಯಾತೀತ ಅಲ್ಲ ಕೋಮುವಾದಿಗಳು ಎಂದು ಬಿಂಬಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಜೆಡಿಸ್ ನ ನಿಲುವು ಏನು? ಎಂಬುದನ್ನು ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ಕೋಮುವಾದಿ ಪಕ್ಷದ ಜೊತೆ ಕೈ ಜೋಡಿಸಿದ್ದರಿಂದ ಜೆಡಿಎಸ್ ನಾಶವಾಗುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಸ್ ಗೆ ಹಿನ್ನಡೆ ಆಗಿದೆ. ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.
ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ನೋವುಂಟು ಮಾಡಿದೆ. ಬಿಜೆಪಿಯವರು ನಮ್ಮ ಅಭ್ಯರ್ಥಿ ವಿರುದ್ದ ನಾಮಪತ್ರ ಸಲ್ಲಿಕೆ ವಿಚಾರದಲ್ಲಿ ತಕರಾರು ತೆಗೆದರು. ಬಿಜೆಪಿ ಅಭ್ಯರ್ಥಿ ರಘು ಮೂಲಕ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ದೂರು ನೀಡಿದರು. ಇದರಿಂದ ದಲಿತ ಸಮುದಾಯದ ಮತದಾರರು ಬಿಜೆಪಿಗೆ ವಿರುದ್ದವಾದರು. ಜೆಡಿಸ್ ಅಭ್ಯರ್ಥಿ ಮಂಜೇಗೌಡ ವಿರುದ್ದವೂ ಸಚಿವ ಸೋಮಶೇಖರ್ ಸೇರಿದಂತೆ ಬಿಜೆಪಿ ನಾಯಕರು ಅಪಪ್ರಚಾರ ಮಾಡಿದರು. ಪರಿಣಾಮ ಒಕ್ಕಲಿಗ ಸಮುದಾಯದ ಮತದಾರರು ಕುಪಿತಗೊಂಡರು. ಈ ಎಲ್ಲಾ ಕಾರಣಗಳಿಂದ ಬಿಜೆಪಿ ಅಭ್ಯರ್ಥಿ ರಘು ಸೋಲನುಭವಿಸಿದ್ದಾರೆ. ಈ ಬಗ್ಗೆ ನಾಯಕರ ಜೊತೆ ರಘು ಆತ್ಮಾವಲೋಕನ ಮಾಡಿಕೊಳ್ಳಲಿ. ಸೋಲಿಗೆ ಕಾರಣ ಹುಡುಕಲಿ ಎಂದು ಸಲಹೆ ನೀಡಿದರು.
ಜೆಡಿಎಸ್ ಬಿಜೆಪಿಯ ಬಿ ಟೀಂ. ಇದರಲ್ಲಿ ಯಾವುದೇ ಅನುಮಾನವಿಲ್ಲ.
ಕುಮಾರಸ್ವಾಮಿ ಪಕ್ಷ ನಿರ್ನಾಮವಾದರೆ ಅದಕ್ಕೆ ಕಾರಣ ಹೆಚ್ ಡಿ ಕುಮಾರಸ್ವಾಮಿ. ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಪ್ರಶ್ನೆ. ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಒಂದು ತತ್ವ ಸಿದ್ದಾಂತ ಇದೆ. ನಮ್ಮದು ಜಾತ್ಯಾತೀತ ಪಕ್ಷ. ಬಿಜೆಪಿ ಕಮ್ಯುನಲ್ ಪಕ್ಷ. ಜೆಡಿಎಸ್ ತತ್ವ ಸಿದ್ದಾಂತ ಏನು ? ಅದನ್ನು ಸ್ಪಷ್ಟಪಡಿಸಿ ನಿಮ್ಮ ನಿಲುವು ಏನು ? ಜೆಡಿಎಸ್ ಬಿಜೆಪಿಯ ಬಿ ಟೀಂ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿ ಜೊತೆ ಕೈ ಜೋಡಿಸಿ ನೀವು ನಿರ್ನಾಮ ಆಗುತ್ತೀರಾ. ಒಕ್ಕಲಿಗ ಸಮುದಾಯದವರು ನಿಮ್ಮ ಜೊತೆ ಇಲ್ಲ. ಇದು ಈ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಹೆಚ್.ಡಿಕೆಯನ್ನ ಎಂ.ಲಕ್ಷ್ಮಣ್ ಕುಟುಕಿದರು.
Key words: According – sources- CM -will –change- Feb 14-KPCC spokesperson- M Laxman