ಮೈಸೂರು,ಸೆ,16,2019(www.justkannada.in): ಅಕ್ರಮವಾಗಿ ರೈತರ ಜಮೀನು ಭೂಸ್ವಾಧೀನ ಮಾಡಲು ಯತ್ನಿಸಲಾಗಿದೆ ಎಂದು ಆರೋಪಿಸಿ ಮುಡಾ ವಿರುದ್ಧ ಬಲ್ಲಹಳ್ಳಿ ಉಳಿಸಿ ಹೋರಾಟ ಸಮಿತಿ ವತಿಯಿಂದ ರೈತರು ಪ್ರತಿಭಟನೆ ನಡೆಸಿದರು.
ಮೈಸೂರಿನ ಮುಡಾ ಕಚೇರಿ ಎದುರು ರೈತರು ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದು ಪ್ರತಿಭಟನೆಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಾಥ್ ನೀಡಿದೆ. ಮೈಸೂರಿನ ಬಲ್ಲಹಳ್ಳಿ ಸುತ್ತಮುತ್ತಲ ಭಾಗಗಳಲ್ಲಿ 480 ಎಕರೆ ಭೂಸ್ವಾಧೀನಕ್ಕೆ ಯತ್ನ ಮಾಡಲಾಗಿದೆ ರೈತರ ವಿರೋಧದ ನಡುವೆಯೂ ಫಲವತ್ತಾದ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಹಾಗೆಯೇ ಕೆಲವು ರೈತರಿಂದ ಬಲವಂತವಾಗಿ ಸಹಿ ಪಡೆದು ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಯತ್ನ ನಡೆದಿದೆ. ಭೂಸ್ವಾಧೀಕನಕ್ಕೆ ೧೬೫ ಮಂದಿ ಜಮೀನು ಮಾಲೀಕರ ವಿರೋಧವಿದೆ. ವಸತಿ ಬಡಾವಣೆ ನಿರ್ಮಾಣ ಮಾಡಲು ಫಲವತ್ತಾದ ಜಮೀನು ಸ್ವಾಧೀನಕ್ಕೆ ಮುಡಾ ಮುಂದಾಗಿದೆ. ಇದರಲ್ಲಿ ಕೆಲವು ರಾಜಕಾರಣಿಗಳ ಕೈವಾಡವಿದೆ. ಕೂಡಲೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಪ್ರತಿಭಟನೆ ವೇಳೆ ರೈತರು ಒತ್ತಾಯಿಸಿದರು.
Key words: Accused – illegally -land acquisition-protests – farmers -against -Muda