ಏ.6 ರಂದು ಪ್ರಸನ್ನ ಹೆಗ್ಗೋಡು ಅವರ “ಆಕ್ಟಿಂಗ್ ಅಂಡ್ ಬಿಯಾಂಡ್” ಪುಸ್ತಕ ಬಿಡುಗಡೆ

ಮೈಸೂರು,ಏಪ್ರಿಲ್,3,2025 (www.justkannada.in): ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಹಿರಿಯ ರಂಗ ನಿರ್ದೇಶಕ ಹಾಗೂ ಗಾಂಧೀವಾದಿ ಪ್ರಸನ್ನ ಹೆಗ್ಗೋಡು ಅವರ “ಆಕ್ಟಿಂಗ್ ಅಂಡ್ ಬಿಯಾಂಡ್” ಪುಸ್ತಕ ಬಿಡುಗಡೆ ಮತ್ತು ಚರ್ಚೆಯನ್ನು ದಿನಾಂಕ 6-4-2025, ಭಾನುವಾರ ಸಂಜೆ 5 ಗಂಟೆಗೆ ಹಾರ್ಡ್ವಿಕ್ ಪಿಯು ಕಾಲೇಜು ಆವರಣದಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಪುಸ್ತಕದ ಕುರಿತು ಮಾತನಾಡಲು ಹಾಗೂ ಲೇಖಕರೊಂದಿಗೆ ಸಂವಾದ ನಡೆಸಲು ಲೇಖಕಿ ಪ್ರೀತಿ ನಾಗರಾಜ್ ಹಾಗೂ L&T ಟೆಕ್ನಾಲಜಿ ಸರ್ವಿಸಸ್ (LTTS) ಡೆಲಿವರಿ ಮುಖ್ಯಸ್ಥ ಹಾಗೂ ಲೇಖಕರು ಶಶಿಧರ ಡೋಂಗ್ರೆ ಅವರು ಭಾಗವಹಿಸಲಿದ್ದಾರೆ. ಕೃತಿಯ ಲೇಖಕರಾದ ರಂಗ ನಿರ್ದೇಶಕ ಪ್ರಸನ್ನ ಹೆಗ್ಗೋಡು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಪುಸ್ತಕದ ಕುರಿತು..

ಪ್ರಸಿದ್ಧ ರಂಗಭೂಮಿ ನಿರ್ದೇಶಕ ಪ್ರಸನ್ನ ಅವರ “ಆಕ್ಟಿಂಗ್ ಆಂಡ್ ಬಿಯಾಂಡ್” ಕೃತಿಯು ಪ್ರದರ್ಶನದ ಸಾರವನ್ನು ಅನಾವರಣಗೊಳಿಸುತ್ತದೆ. ಯಾವುದೇ ಅಲಂಕಾರಗಳಿಲ್ಲದೆ, ಕೇವಲ ಮೂಲಭೂತ ಅಂಶಗಳು ಸತ್ಯ ಮತ್ತು ಅನುಕರಣದ ಮೇಲೆ ಕೇಂದ್ರೀಕೃತವಾಗಿದೆ. ಈ ಕೃತಿ ಪ್ರಸಿದ್ಧಿಯ ನಾಟಕೀಯತೆಯನ್ನು ತಿರಸ್ಕರಿಸಿ, ಕಲೆಯ ನಿಜವಾದ ತಂತ್ರಗಳ ಮೇಲೆ ದೃಢವಾಗಿ ನಿಂತಿದೆ. ಇದು ಅಭಿನಯವನ್ನು ಕೇವಲ ಚಮತ್ಕಾರಕ್ಕೆ  ಮಾತ್ರ ಸೀಮಿತವಾಗಿರಿಸದೆ, ಅದನ್ನು ಆಳವಾಗಿ ಅನ್ವೇಷಿಸುವವರೊಂದಿಗೆ ಸಂಭಾಷಿಸುತ್ತದೆ. ಇಲ್ಲಿ ಕಲೆಯನ್ನು ತನ್ನ ಮೂಲಸ್ವರೂಪದಲ್ಲಿ ಪ್ರಸ್ತುತಪಡಿಸಿದ್ದು ಯಾವುದೇ ಭ್ರಮೆಗಳಿಲ್ಲದೆ, ‘ಪರಕಾಯ ಪ್ರವೇಶ’ದ ಅಂತಃಸತ್ವದೊಂದಿಗೆ ಮುಖಾಮುಖಿಯಾಗಿಸುತ್ತದೆ.

Key words: Prasanna Hegodu “Acting and Beyond” book, Release, April 6