ಕೊಪ್ಪಳ,ಮಾರ್ಚ್,19,2024(www.justkannada.in): ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೆ ಕೆಲ ನಾಯಕರಿಂದ ಅಸಮಾಧಾನ ಭುಗಿಲೆದ್ದಿದೆ. ಈ ಮಧ್ಯೆ ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಹಾಲಿ ಸಂಸದ ಸಂಗಣ್ಣ ಕರಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಂಸದ ಸಂಗಣ್ಣ ಕರಡಿ, ನನಗೆ ಟಿಕೆಟ್ ಯಾಕೆ ಕೈತಪ್ಪಿತು ಎಂದು ಗೊತ್ತಾಗಲಿಲ್ಲ. ಯಾರಿಗೆ ಟಿಕೆಟ್ ಕೊಡಬೇಕು ಅಂತಾ ನನ್ನ ಜೊತೆ ಚರ್ಚಿಸಬೇಕಿತ್ತು. ಬಿಎಸ್ ಯಡಿಯೂರಪ್ಪ ಮೇಲೆ ಸಾಕಷ್ಟು ವಿಶ್ವಾಸವಿತ್ತು ಟಿಕೆಟ್ ಬದಲಾವಣೆ ಮಾಡಿವಾಗ ನನ್ನ ಜೊತೆ ಚರ್ಚಿಸಬೇಕಿತ್ತು. ಟಿಕೆಟ್ ಸಿಗದಂತೆ ಜಿಲ್ಲೆಯ ಬಿಜೆಪಿ ನಾಯಕರೇ ಷಡ್ಯಂತ್ರ ಮಾಡಿದ್ರು ಎಂದು ಆರೋಪಿಸಿದರು.
ಬಿಜೆಪಿ ನನ್ನನ್ನ 2 ಬಾರಿ ಸಂಸದರಾಗಿ ಮಾಡಿದೆ. ಆದರೆ ಈಗ ರಾಜ್ಯ ನಾಯಕರ ನಡೆಯಿಂದ ನೋವಾಗಿದೆ. ಗುರವಾರ ಕಾರ್ಯಕರ್ತರ ಬೆಂಬಲಿಗರ ಸಭೆ ಇದೆ. ಸಭೆಯಲ್ಲಿ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸಂಗಣ್ಣ ಕರಡಿ ಹೇಳಿದ್ದಾರೆ.
Key words: Activists – opinion – support -next -decision- BJP -MP Sanganna Karadi.