ಬೆಂಗಳೂರು,ಅಕ್ಟೋಬರ್,19,2022(www.justkannada.in): ಕಾಂತಾರ ಸಿನಿಮಾ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಟೀಕೆಗೆ ಗುರಿಯಾಗಿರುವ ನಟ ಚೇತನ್ ಇದೀಗ ತಮ್ಮ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ನಟ ಚೇತನ್, ಭೂತಕೋಲ ಹಿಂದೂ ಧರ್ಮದಲ್ಲಿ ಬರುತ್ತೆ ಅನ್ನೋದ ತಪ್ಪು. ಹಿಂದೂ ಎನ್ನುವುದು ಹೇಗೆ ಬಳಸುತ್ತೇವೆ ಅನ್ನೋದು ಮುಖ್ಯ. ಭೂತಾರಾಧನೆಯನ್ನ ಆದಿವಸಿಗಳು ಮಾಡುತ್ತಾರೆ. ಭೋತಕೋಲದಲ್ಲಿ ಬ್ರಾಹ್ಮಣ್ಯ ಎಂಬುದು ಇಲ್ಲ. ಕೊರಗ ಸಮುದಾಯ ಮೂಲ ನಿವಾಸಿಗಳ ಸಮುದಾಯ. ಕೊರಗರನ್ನ ಆ ಭಾಗದಲ್ಲಿ ಈಗಲೂ ಅಸ್ಪೃಶ್ಯರಂತೆ ಕಾಣುತ್ತಾರೆ. ಕೊರಗ ಸಮುದಾಯಕ್ಕೆ ಅವರದೇ ಸಂಸ್ಕೃತಿ ಇದೆ. ಈ ಮೂಲ ನಿವಾಸಿಗಳು ಈ ಬ್ರಾಹ್ಮಣ್ಯಕ್ಕೆ ಒಳಪಟ್ಟವರಲ್ಲ ಎಂದು ತಿಳಿಸಿದ್ದಾರೆ.
ಭೂತಕೋಲ ಹಿಂದೂ ಧರ್ಮಕ್ಕೆ ಸೇರಿದಲ್ಲ. ಸಿನಿಮಾದಲ್ಲಿ ಕೆಲವು ಕಡೆ ವೈದಿಕತೆ ಸೇರಿಸಲಾಗಿದೆ. ಇದನ್ನೂ ಹಿಂದೂ ಹೇಳಿದರೆ ಅದನ್ನ ಒಪ್ಪಲು ಆಗಲ್ಲ. ಅವರು ಮೂಲ ನಿವಾಸಿಗಳು ಹಿಂದೂಗಳಲ್ಲ. ಸಿನಿಮಾದಲ್ಲಿ ಹಿಂದೂ ಎಂದು ಬಳಸಬೇಡಿ ಎಂದರು.
ಕೊರಗಜ್ಜ ಹಿಂದೂ ಅಲ್ಲ. ಕೊರಗಜ್ಜ ಅವೈದಿಕ ಸಂಸ್ಕೃತಿ. ಕೊರಗಜ್ಜ ಹಿಂದೂ ಸಂಸ್ಕೃತಿಗೆ ಸೇರಿದವರಲ್ಲ. ಕೊರಗಜ್ಜನನ್ನ ಹಿಂದೂಗಳು ನಂಬಬಹುದು ಎಂದು ನಟ ಚೇತನ್ ತಿಳಿಸಿದರು.
Key words: Actor -Chetan clarified – controversial- post- about- Kantara movie.