ನಟ ದರ್ಶನ್ ಜಾಮೀನು ರದ್ದು ಕೋರಿ  ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ: ಜ.24 ರಂದು ವಿಚಾರಣೆ

ಬೆಂಗಳೂರು,ಜನವರಿ,17,2025 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ  ಸಂಬಂಧಿಸಿದಂತೆ ನಟ ದರ್ಶನ್‌  ಸೇರಿ 7 ಆರೋಪಿಗಳಿಗೆ ಮಂಜೂರಾಗಿರುವ ಜಾಮೀನು ರದ್ದು ಕೋರಿ  ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿರುವ  ಮೇಲ್ಮನವಿಯ ಅರ್ಜಿಯ ವಿಚಾರಣೆಗೆ ದಿನ ನಿಗದಿಯಾಗಿದೆ.

ನಟ ದರ್ಶನ್ ಗೆ ಜಾಮೀನು ಪ್ರಶ್ನಿಸಿ  ಸಲ್ಲಿಸಿರುವ ಅರ್ಜಿ ವಿಚಾರಣೆ ಜನವರಿ 24 ರಂದು ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಜನವರಿ 6 ರಂದು ಪೊಲೀಸರು ದರ್ಶನ್‌ (ಗ್ಯಾಂಗ್‌ ಜಾಮೀನು ರದ್ದತಿಗೆ ಮೇಲ್ಮನವಿ ಸಲ್ಲಿಸಿದ್ದರು. ನಟ ದರ್ಶನ್‌ ಪವಿತ್ರಾಗೌಡ, ನಾಗರಾಜ್, ಲಕ್ಷ್ಮಣ್, ಅನುಕುಮಾರ್, ಜಗದೀಶ್ ಮತ್ತು ಪ್ರದೋಶ್​​​ ಅವರ ಜಾಮೀನು ಅರ್ಜಿಯನ್ನು ಪ್ರಶ್ನಿಸಿ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದಾರೆ.

ಡಿಸೆಂಬರ್‌ ನಲ್ಲಿ ದರ್ಶನ್‌ ಸೇರಿ 7 ಮಂದಿ ಆರೋಪಿಗಳು ಹೈಕೋರ್ಟ್ ನಲ್ಲಿ ಪೂರ್ಣ ಪ್ರಮಾಣದ ಜಾಮೀನು ಪಡೆದಿದ್ದರು.

Key words: Actor Darshan, cancellation, bail, Supreme Court, Hearing