ಮೈಸೂರಿನಲ್ಲಿ ನಟ ದರ್ಶನ್ ಬಂಧನವಾಗಿದ್ದೇಗೆ..? ಇಲ್ಲಿದೆ ಮಾಹಿತಿ.

ಮೈಸೂರು,ಜೂನ್,11,2024 (www.justkannada.in):  ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ 10 ಮಂದಿಯನ್ನ ಈಗಾಗಲೇ ಬೆಂಗಳೂರು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಈ ಮಧ್ಯೆ ಇಂದು ದರ್ಶನ್ ಅವರನ್ನ ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಬೆಂಗಳೂರು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಬೆಳಿಗ್ಗೆ 8 ಗಂಟೆಗೆ ದರ್ಶನ್ ಸ್ನೇಹಿತರ ಜೊತೆ ಮೈಸೂರಿನ ಹೋಟೆಲ್ ನಲ್ಲಿ ಇರುವಾಗಲೇ ಅರೆಸ್ಟ್ ಮಾಡಿದ್ದರು.

ಕಳೆದ ಎರಡು ದಿನಗಳಿಂದ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಟ ದರ್ಶನ್  ವಾಸ್ತವ್ಯ ಹೂಡಿದ್ದರು. ಪ್ರತಿಷ್ಠಿತ ಲಲಿತ್ ಮಹಲ್  ಹೋಟೆಲ್ ನಲ್ಲಿ ದರ್ಶನ್ ಅಭಿನಯದ ಡೆವಿಲ್ ಮೂವಿ ಚಿತ್ರೀಕರಣ ನಡೆಯುತ್ತಿದೆ.  ಡೆವಿಲ್‌ ಸಿನಿಮಾ ಟೀಮ್‌ನಿಂದ ಬುಕ್ ರೂಂ ಆಗಿದ್ದು ಜೂನ್ 9 ರಿಂದ ರ್ಯಾಡಿಷನ್ ಬ್ಲೂ ಹೋಟೆಲ್‌ನಲ್ಲಿ ದರ್ಶನ್ ಉಳಿದುಕೊಂಡಿದ್ದಾರೆ. ಹೋಟೆಲ್ ಮುಂಭಾಗದಲ್ಲಿಯೇ KA 01 MY 7999 ನಂಬರಿನ ಕಾರು ಇದೆ. ಕಳೆದ ರಾತ್ರಿ ಖಾಸಗಿ ಹೋಟೆಲ್ ನಲ್ಲಿ  ನಟ ದರ್ಶನ್ ತಂಗಿದ್ದರು.

ಈ ನಡುವೆ ಇಂದು ಬೆಳಿಗ್ಗೆ ಆರು ಗಂಟೆಗೆ ಮೈಸೂರಿನ ಕುವೆಂಪು ನಗರದ ಗೋಲ್ಡ್ ಜಿಮ್ ಗೆ ನಟ ದರ್ಶನ್  ಆಗಮಿಸಿ ಒಂದು ತಾಸು ಜಿಮ್ ನಲ್ಲಿ ವರ್ಕ್ ಔಟ್ ಮುಗಿಸಿ ಹೊರ ಬಂದಿದ್ದರು. ಈ ವೇಳೆ  ಬಾಡಿಗಾರ್ಡ್ ಮೂಲಕ ಕಲ್ಲಂಗಡಿ ಹಣ್ಣಿನ ಜ್ಯೂಸ್ ತರಿಸಿಕೊಂಡು ಕುಡಿದಿದ್ದಾರೆ. ಬಳಿಕ ಜಿಮ್ ಬಳಿಯ ಅಣತಿ ದೂರದಲ್ಲಿರುವ ಹೋಟೆಲ್ ಗೆ ತೆರಳುವ ಮಾರ್ಗ ಮಧ್ಯೆ  ಪೊಲೀಸರು ನಟ ದರ್ಶನ್ ರನ್ನ  ಬಂಧಿಸಿದ್ದಾರೆ

ಅರೆಸ್ಟ್ ಮಾಡಿದ ಬಳಿಕ ತನ್ನ ಕಾರಿನಲ್ಲಿ ಬರುವುದಾಗಿ ನಟ ದರ್ಶನ್ ಹೇಳಿದ್ದು, ಆದರೆ  ಪೊಲೀಸರು ತಮ್ಮ ಕಾರಿನಲ್ಲೇ  ಬೆಂಗಳೂರಿಗೆ ಕರೆದೊಯ್ದುರು. ಇದೀಗ ವಿಚಾರಣೆ ನಡೆಯುತ್ತಿದೆ.

Key words: Actor, Darshan, arrest, Mysore