ಮೈಸೂರು,ಜುಲೈ,16,2021(www.justkannada.in): ಸಪ್ಲೇಯರ್ ಮೇಲೆ ದರ್ಶನ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೇಶ್ ಪ್ರಿನ್ ಹೋಟೆಲ್ ಮಾಲೀಕ ಸಂದೇಶ್ ಸ್ಪಷ್ಟೀಕರಣ ನೀಡಿದ್ದಾರೆ.
ಪೊಲೀಸ್ ವಿಚಾರಣೆ ಬಳಿಕ ಮಾಧ್ಯಮಗಳಿಗೆ ಮಾತನಾಡಿರುವ ಹೋಟೆಲ್ ನ ಮಾಲೀಕ ಸಂದೇಶ್, ಘಟನೆ ನಡೆದು ಹಲವು ದಿನಗಳ ನಂತರ ಯಾಕೆ ಈ ವಿಚಾರ ಸುದ್ದಿಯಾಗ್ತಿದೆ ಎಂದು ತಿಳಿಯುತ್ತಿಲ್ಲ.ಅಂದು ನಮ್ಮ ಸಿಬ್ಬಂದಿ ಮೇಲೆ ನಟ ದರ್ಶನ್ ಗರಂ ಆಗಿದ್ದು ನಿಜ ಆದರೆ ಯಾರಮೇಲೂ ಹಲ್ಲೆ ಮಾಡಿಲ್ಲ. ಈ ಸಂಬಂಧ ಇಂದು ಬೆಳಿಗ್ಗೆ ಪೊಲೀಸ್ ನೋಟಿಸ್ ಬಂದಿತ್ತು. ಇದೀಗ ವಿಚಾರಣೆ ಕೂಡ ಮುಗಿದಿದೆ. ಹೋಟೆಲ್ ನಲ್ಲಿದ್ದ ಸಿಸಿಟಿವಿ ಫುಟೇಜ್ ಗಳನ್ನ ಪೊಲೀಸರು ಕೊಂಡೊಯ್ದಿದ್ದಾರೆ. 10 ದಿನಗಳ ವರೆಗಿನ ಸಿಸಿಟಿವಿ ಫುಟೇಜ್ ಮಾತ್ರ ಇಲ್ಲಿ ದಾಖಲಾಗಿರುತ್ತೆ. ಪೊಲೀಸರು ಅವರಿಗೆ ಅಗತ್ಯವಿರುವ ವಿಡಿಯೋಗಳನ್ನ ಕೊಂಡೊಯ್ದಿದ್ದಾರೆ. ಪ್ರತಿ 10 ದಿನಗಳಿಗೊಮ್ಮೆ ಸಿಸಿಟಿವಿ ಫುಟೇಜ್ ಎರೈಸ್ ಆಗುತ್ತೆ. ಘಟನೆ ನಡೆದ ದಿನದ ವಿಡಿಯೋ ಎರೈಸ್ ಆಗಿರುತ್ತೆ. ಪೊಲೀಸರು ಅವರಿಗೆ ಅಗತ್ಯವಿರುವ ವಿಡಿಯೋಗಳನ್ನ ಕೊಂಡೊಯ್ದಿದ್ದಾರೆ ಎಂದು ಹೇಳಿದರು.
ಇಂದ್ರಜಿತ್ ಲಂಕೇಶ್ ಅವರು ಯಾಕೆ ಈ ರೀತಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ. ಈ ಘಟನೆಯಿಂದ ನನ್ನ ಹೋಟೆಲ್ ಬ್ಯುಸಿನೆಸ್ ಗೆ ತೊಂದರೆಯಾಗ್ತಿದೆ. ದಯಮಾಡಿ ಈ ವಿಚಾರವನ್ನ ಇಲ್ಲಿಗೆ ಬಿಡೋದು ಒಳ್ಳೆಯದು. ನನಗೆ ಇಬ್ಬರೂ ಒಳ್ಳೆಯ ಸ್ನೇಹಿತರೇ.ಅವರವರ ವೈಯಕ್ತಿಕ ವಿಚಾರ ಇದ್ದರೆ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ಏನಾದರೂ ಮಾಡಿಕೊಳ್ಳಲಿ. ಆದರೆ ಹೋಟೆಲ್ ವಿಚಾರ ಮಧ್ಯೆ ತರೋದು ಬೇಡ ಎಂದು ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ತಿಳಿಸಿದರು.
ಘಟನೆಯ ಬಗ್ಗೆ ಬಿಹಾರ ಮೂಲದ ಹೋಟೆಲ್ ಸಿಬ್ಬಂದಿ ಸಮೀರ್ ಮಾತನಾಡಿದ್ದು, ಅಂದು ಫುಡ್ ಸಪ್ಲೈ ಮಾಡುವುದು ಸ್ವಲ್ಪ ತಡವಾಯ್ತು. ಹಾಗಾಗಿ ದರ್ಶನ್ ಅವರು ಕೋಪಗೊಂಡಿದ್ದು ನಿಜ. ಆದರೆ ಯಾರ ಮೇಲೂ ಹಲ್ಲೆ ಮಾಡಿಲ್ಲ. ದರ್ಶನ್ ಕೋಪಗೊಂಡ ಕೂಡಲೆ ನಮ್ಮ ಹೋಟೆಲ್ ಎಂ.ಡಿ ಸಂದೇಶ್ ಅವರಿಗೆ ವಿಚಾರ ತಿಳಿಸಿದೆವು. ಕೂಡಲೆ ಸ್ಥಳಕ್ಕೆ ಬಂದ ಸಂದೇಶ್ ಅವರು ದರ್ಶನ್ ಅವರನ್ನ ಸಮಾಧಾನಪಡಿಸಿದ್ರು. ಘಟನೆ ನಡೆದ ಸಂದರ್ಭ ದರ್ಶನ್ ಅವರು ಯಾರ ಮೇಲೂ ದೈಹಿಕ ಹಲ್ಲೆ ನಡೆಸಿಲ್ಲ ಎಂದು ಹೋಟೆಲ್ ಸಿಬ್ಬಂದಿ ಸಮೀರ್ ಸ್ಪಷ್ಟನೆ ನೀಡಿದ್ದಾರೆ.
Key words: actor-Darshan –assault- case-Hotel owner- Sandesh – clearify