ನ್ಯಾಯಾಲಯಕ್ಕೆ ನಟ ದರ್ಶ‍ನ್ ಗೈರು: ಎಚ್ಚರಿಕೆ ಕೊಟ್ಟ ನ್ಯಾಯಾಧೀಶರು

ಬೆಂಗಳೂರು,ಏಪ್ರಿಲ್,8,2025 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಗೈರುಹಾಜರಾದ ನಟ ದರ್ಶನ್ ಗೆ ಮುಂದಿನ ವಿಚಾರಣೆ ವೇಳೆ ಹಾಜರಾಗುವಂತೆ 57ನೇ ಸಿಸಿಹೆಚ್  ನ್ಯಾಯಾಲಯ ಎಚ್ಚರಿಕೆ ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 57ನೇ ಸಿಸಿಹೆಚ್  ನ್ಯಾಯಾಲಯ ಇಂದು ವಿಚಾರಣೆ ನಡೆಯಿತು . ವಿಚಾರಣೆ ವೇಳೆ ನಟ ದರ್ಶನ್ ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳು ಹಾಜರಾಗಿದ್ದರು. ಆದರೆ ನಟ ದರ್ಶನ್ ಪರ ವಕೀಲರು ಅನಾರೋಗ್ಯ ಹಿನ್ನೆಲೆ ಹಾಜರಾತಿಯಿಂದ ವಿನಾಯಿತಿ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಇದೇ ವೇಳೆ ನಟ ದರ್ಶನ್ ಪರ ವಕೀಲರಿಗೆ ಎಚ್ಚರಿಕೆ ನೀಡಿದ ನ್ಯಾಯಾಧೀಶರು,  ಮುಂದಿನ ವಿಚಾರಣೆ ವೇಳೆ ಹಾಜರಾಗಬೇಕು. ಕೇಸ್ ವಿಚಾರಣೆ ಇದ್ದ ದಿನ ಹಾಜರಾಗಬೇಕು.  ಯಾವುದೇ ಕಾರಣಕ್ಕೂ ವಿಚಾರಣೆಗೆ ಗೈರಾಗಬಾರದು ಎಂದು ಸೂಚನೆ ನೀಡಿ ವಿಚಾರಣೆಯನ್ನ ಮೇ 20ಕ್ಕೆ ಮುಂದೂಡಿಕೆ ಮಾಡಿದರು.

Key words: Actor Darshan, absent,  court,  Judge, warning