ಬೆಂಗಳೂರು, ಅಕ್ಟೋಬರ್ 30,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ನಟ ದರ್ಶನ್ ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು ಇಂದು ಸಂಜೆ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ನಟ ದರ್ಶನ್ ಗೆ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ನಟ ದರ್ಶನ್ ಗೆ ಕೆಲವು ಷರತ್ತುಗಳನ್ನು ಸಹ ಕೋರ್ಟ್ ವಿಧಿಸಲಾಗಿದ್ದು ಅವುಗಳನ್ನ ಪೂರೈಸಬೇಕಿದೆ.
ನ್ಯಾಯಾಲಯದ ಆದೇಶ ಪ್ರತಿಯನ್ನು ಬೈ ಹ್ಯಾಂಡ್ ಬಳ್ಳಾರಿ ಜೈಲಿಗೆ ತಲುಪಿಸಲಾಗುತ್ತದೆ. ಆದೇಶ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪಿದ ನಂತರ ನಟ ದರ್ಶನ್ ಬಿಡುಗಡೆಯಾಗಲಿದ್ದಾರೆ. ಜಾಮೀನು ಪ್ರತಿ ತಲುಪಿಸಲು ವಕೀಲರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ವಕೀಲರು ಷರತ್ತು ಪೂರೈಸಿದರೇ ಸಂಜೆಯೇ ದರ್ಶನ್ ಬಿಡುಗಡೆಯಾಗಲಿದ್ದಾರೆ.
ಈ ಕುರಿತು ಮಾತನಾಡಿರುವ ನಟ ದರ್ಶನ್ ಪರ ವಕೀಲ ಸುನೀಲ್, ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಾಡಿದ್ದರು. ಈಗ ಕೋರ್ಟ್ 6 ವಾರ ಜಾಮೀನು ಮಂಜೂರು ಮಾಡಿದೆ. ನಾವು ಮೈಸೂರು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೇಳಿದ್ದವು. ಚಿಕಿತ್ಸೆ ಬಗ್ಗೆ ಕುಟುಂಬ ನಿರ್ಧರಿಸುತ್ತೆ ಕೋರ್ಟ್ ಹಾಕಿರುವ ಎಲ್ಲಾ ಷರತ್ತು ಪಾಲಿಸುತ್ತೇವೆ. ಸಂಜೆಯೊಳಗೆ ಬಿಡುಗಡೆ ಆಗುತ್ತಾರಾ ನೋಡಬೇಕಿದೆ ಎಂದಿದ್ದಾರೆ.
Key words: Actor Darshan, jail, released, evening