ಬೆಂಗಳೂರು, ಜನವರಿ 29, 2019 (www.justkannada.in): ಕೆಲವು ತಿಂಗಳ ಹಿಂದಷ್ಟೇ ಕೀನ್ಯಾ ಪ್ರವಾಸ ಮಾಡಿದ್ದ ದರ್ಶನ್ ಈಗ ಉತ್ತರಾಖಂಡ ಪ್ರವಾಸದಲ್ಲಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ಬಿಡುವು ಸಿಕ್ಕಾಗಲೆಲ್ಲಾ ಹೆಗಲಿಗೆ ಕ್ಯಾಮರಾ ಏರಿಸಿಕೊಂಡು ಕಾಡಿನ ಕಡೆಗೆ ತೆರಳುತ್ತಾರೆ. ಈ ಬಾರಿ ಗಣರಾಜ್ಯೋತ್ಸವಕ್ಕೆ ಉತ್ತರಾಖಂಡದಿಂದಲೇ ಶುಭಾಶಯ ಕೋರಿದ್ದರು ದರ್ಶನ್.
ಗೆಳೆಯರು ಮತ್ತು ವೈಲ್ಡ್ಲೈಫ್ ಫೋಟೋಗ್ರಫರ್ಗಳ ತಂಡದೊಂದಿಗೆ ಉತ್ತರಾಖಂಡಕ್ಕೆ ತೆರಳಿರುವ ದರ್ಶನ್ ಅಲ್ಲಿನ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ದೊಡ್ಡದಾದ ಕ್ಯಾಮೆರಾವನ್ನು ಹೊತ್ತುಕೊಂಡು ಉತ್ತರಾಖಂಡದ ಸತ್ತಲ್ ಕಾಡಿನಲ್ಲಿ ಸುತ್ತಾಡುತ್ತಿರುವ ಡಿ ಬಾಸ್ ಫೋಟೋಗಳನ್ನು ಅವರ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದರು.