ಬೆಂಗಳೂರು,ಜುಲೈ,10,2024 (www.justkannada.in): ಮನೆಯಿಂದಲೇ ಊಟ, ಹಾಸಿಗೆ, ಪುಸ್ತಕ ಕೋರಿ ನಟ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ಜುಲೈ 18ಕ್ಕೆ ಮುಂದೂಡಿಕೆ ಮಾಡಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮನೆಯಿಂದಲೇ ಊಟ, ಹಾಸಿಗೆ, ಪುಸ್ತಕ ಅವಕಾಶಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನ ನ್ಯಾ ಎಸ್ ಆರ್ ಕೃಷ್ಣಕಮಾರ್ ಪೀಠ ವಿಚಾರಣೆ ನಡೆಸಿತು.
ನಟ ದರ್ಶನ್ ಪರ ವಾದ ಮಂಡಿಸಿದ ವಕೀಲ ಕೆ.ಎನ್ ಫಣೀಂದ್ರ, ಜೈಲು ನಿಯಮಾವಳಿಗಳಲ್ಲಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್ ಗೆ ಮನೆ ಊಟದ ಅವಕಾಶ ನೀಡಿಲ್ಲ ಎಂದರು.
ಮನೆಯಿಂದ ಊಟ ಹಾಸಿಗೆಗೆ ಪುಸ್ತಕ ಪಡೆಯಲು ಕೋರಿದ್ದೀರಿ. ಈ ಬಗ್ಗೆ ಈ ಹಿಂದೇ ಕೋರ್ಟ್ ತೀರ್ಪುಗಳಿವೆಯೇ . ಜೈಲು ಕೈಪಿಡಿಯಲ್ಲಿ ಮನೆ ಊಟದ ಬಗ್ಗೆ ನಿಯಮವಿದೆಯೇ ಜೈಲು ಅಧಿಕಾರಿಗಳಿಗೆ ನೀವು ಮನವಿ ಮಾಡಿದ್ದೀರಾ? ವಿಚಾರಣಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದೇ ಹೈಕೋರ್ಟ್ ನಲ್ಲಿ ಸಲ್ಲಿಸಬಹುದೇ..? ಇದನ್ನೂ ಬೇರೆ ಪ್ರಕರಣಗಳಂತೆ ಪರಿಗಣಿಸಲಾಗುವುದು ಕಾನೂನಿನ ಅನುಸಾರ ನಿರ್ಧಾರ ಮಾಡಲಾಗುತ್ತದೆ ಎಂದು ನ್ಯಾ ಎಸ್ ಆರ್ ಕೃಷ್ಣಕುಮಾರ್ ಪೀಠ ಅಭಿಪ್ರಾಯ ಪಟ್ಟರು.
ಈ ನಡುವೆ ತನಿಖಾಧಿಕಾರಿಗಳು ಜೈಲು ಅಧಿಕಾರಿಗಳಿಗೆ ನೋಟಿಸ್ ನೀಡಿದ ನ್ಯಾ ಎಸ್ ಆರ್ ಕೃಷ್ಣಕುಮಾರ್ ಪೀಠ ವಿಚಾರಣೆಯನ್ನ ಜುಲೈ 18ಕ್ಕೆ ಮುಂದೂಡಿಕೆ ಮಾಡಿತು.
Key words: Actor, Darshan, Writ Petition, Adjourned, July 18