ಬೆಂಗಳೂರು, ಜನವರಿ 20, 2021 (www.justkannada.in): ನಟ ಪೃಥ್ವಿ ಅಂಬರ್ ಈಗ ಬಾಲಿವುಡ್ ನಲ್ಲಿ ನಟಿಸುವ ಚಾನ್ಸ್ ಪಡೆದಿದ್ದಾರೆ.
ದಿಯಾ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದು ಸಾಕಷ್ಟುಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಪೃಥ್ವಿಗೆ ಬಾಲಿವುಡ್ ಆಫರ್ ಬಂದಿದೆ.
ದಿಯಾ ಸಿನಿಮಾ ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ. ಹಿಂದಿ ರಿಮೇಕ್ ನಲ್ಲೂ ಪೃಥ್ವಿ ಆದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಪೃಥ್ವಿ ಆದಿಯಾಗಿ ಮತ್ತೆ ಹಿಂದಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ನಟ ಪೃಥ್ವಿ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸುಳಿವು ನೀಡಿದ್ದಾರೆ.