ಬೆಂಗಳೂರು, ಆಗಸ್ಟ್ 02, 2019 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ಅಪ್ಪನ ಜತೆ ಸೇರಿ ಡಬ್ಬಿಂಗ್ ಕೆಲಸ ಮುಗಿಸಿದ್ದಾರೆ.
ಹೌದು. ಸದ್ಯ ‘ಗೀತಾ’ ಸಿನಿಮಾದ ಡಬ್ಬಿಂಗ್ ಕೆಲಸಗಳು ಈಗ ನಡೆಯುತ್ತಿದೆ. ಅಪ್ಪನ ಜೊತೆಗೆ ವಿಹಾನ್ ಕೂಡ ಡಬ್ಬಿಂಗ್ ಮಾಡಿದ್ದಾರೆ.
ಮೈಕ್ ಮುಂದೆ ನಿಂತು ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಈ ಫೋಟೋವನ್ನು ಗಣೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.
‘ಗೀತಾ’ ಗಣೇಶ್ ನಟನೆಯ ಮಾತ್ರವಲ್ಲದೆ ನಿರ್ಮಾಣ ಸಿನಿಮಾವಾಗಿದೆ. ಶಿಲ್ಪಾ ಗಣೇಶ್ ಹಾಗೂ ಸೈಯದ್ ಸಲಾಂ ಚಿತ್ರಕ್ಕೆ ಹಣ ಹಾಕಿದ್ದಾರೆ. ವಿಜಯ್ ನಾಗೇಂದ್ರ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.