ಮೈಸೂರು,ಫೆಬ್ರವರಿ,24,2021(www.justkannada.in): ಜಗ್ಗೇಶ್ ನಾನಾ ತರನಾದ ಹೇಳಿಕೆ ನೀಡುತ್ತಿದ್ದಾರೆ. ಹತ್ತಳ್ಳಿಲಿ ನಡೆದ ಘಟನೆ ಅಲ್ಲಿಗೆ ಬಿಟ್ಟಿದ್ದರೆ ಏನು ಆಗುತ್ತಾ ಇರಲಿಲ್ಲ. ಜಗ್ಗೇಶ್ ಈ ರೀತಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದಾರೆ.
ನಟ ದರ್ಶನ್ ವಿರುದ್ದ ಹಿರಿಯ ನಟ ಜಗ್ಗೇಶ್ ಹೇಳಿಕೆ ವಿಚಾರ ಕುರಿತು ಮಾತನಾಡಿದ ನಿರ್ಮಾಪಕ ಸಂದೇಶ್ ನಾಗರಾಜ್ , ಈ ವಿಚಾರದಲ್ಲಿ ರಾಜಕೀಯ ಜಾತಿ, ಆರ್ ಎಸ್ ಎಸ್ ವಿಚಾರ ಮಾತನಾಡಬಾರದು. ಆರ್ ಎಸ್ ಎಸ್ ದೊಡ್ಡ ಸಂಸ್ಥೆ. ಅವೆಲ್ಲವನ್ನು ಮಾತಾಡೊದು ಸರಿಯಲ್ಲ. ಇದು ತಪ್ಪು. ನಾನೆ ಜಗ್ಗೇಶ್ ಗೂ ಹೇಳುತ್ತೇನೆ. ದರ್ಶನ ಜಗ್ಗೇಶ್ ಇಬ್ಬರೂ ನನಗೆ ಸ್ನೇಹಿತರು. ಸಿನಿಮಾಕ್ಕೆ ಜಾತಿ ತರಬಾರದು. ಮುಂದೆ ಆಗುವ ಅನಾಹುತಕ್ಕೆ ಕಾರಣರಾಗಬಾರದು. ಜಗ್ಗೇಶ್ ನಾನು ಸೀನಿಯರ್, ಗುರುರಾಘವೇಂದ್ರ ಭಕ್ತ ಹಾಗೆ ಹೀಗೆ ಅಂತ ಹೇಳೋದು ಸರಿಯಲ್ಲ. ನಾನು ದರ್ಶನ್ ಗೂ ಕೂಡ ಹೇಳುತ್ತೇನೆ. ಏನೂ ಮತಾಡಬೇಡ ಅಂತ . ಸಿನಿಮಾಕ್ಕೆ ಜಾತಿ ತರೋದು ಮಹಾಪರಾಧ. ನಾನು ನಿರ್ಮಾಪಕ ಸಂಘದ ಅಧ್ಯಕ್ಷನಾಗಿ, ಹಿರಿಯನಾಗಿ ಹೇಳುತ್ತಿದ್ದೇನೆ. ಮುಂದೆ ನಾನು ಇಬ್ಬರನೂ ಕೂರಿಸಿ ಪ್ರೆಸ್ ಮೀಟ್ ಮಾಡಿಸುತ್ತೇನೆ. ಎಲ್ಲ ಅಭಿಮಾನಿಗಳು ಶಾಂತಿಯಿಂದ ಇರಿ ಎಂದು ಹೇಳು ಅಂತ ನಾನು ದರ್ಶನಗೆ ಹೇಳುತ್ತೇನೆ ಎಂದರು.
ನಾನು ಏನೇ ಮಾತನಾಡಿದರು ದರ್ಶನ್ ಪರ ಅಂತಾನೆ ಹೇಳೋದು. ನನಗೆ ಸುಮನ್ ರಂಗನಾಥ್ ಈ ಘಟನೆ ನಡೆದಾಗ ಪೋನ್ ಹೇಳಿದ್ರು. ನಾನು ಮೈಸೂರಿನ ಅಭಿಮಾನಿಗಳಿಗೆಲ್ಲ ಶಾಂತಿಯಿಂದ ಇರುವಂತೆ ಹೇಳಿದ್ದೇನೆ. ನಾವು ಅಭಿಮಾನಿಗಳಿಗಾಗಿ ಚಿತ್ರ ಮಾಡೋದು. ಜಗ್ಗೇಶ್ ಸಿನೀಯರ್ ಅಂತ ಹೇಳ್ತಾರಲ್ಲ ಅವರು ಕ್ಷಮಿಸಬೇಕು. ಜಾತಿ ,ರಾಜಕೀಯ ಮಾಡಬಾರದು..ಸಿನಿಮಾದಲ್ಲಿ ಜಾತಿ ಎಂಬುದೇ ಇಲ್ಲ. ನಮ್ಮವರು ತಪ್ಪು ಮಾಡಿದ್ರೆ ಅವರೇ ಹೇಳಬೇಕು. ಅವರೇ ದರ್ಶನ್ ಗೆ ಪೋನ್ ಮಾಡಿ ಹೇಳಬಹುದಿತ್ತು. ಅದನ್ನ ಬಿಟ್ಟು ಈ ರೀತಿ ಮೀಡಿಯಾದಲ್ಲಿ ಹೇಳಿಕೆ ಕೊಡೋದು ಸರಿಯಲ್ಲ ಎಂದರು.
ದರ್ಶನ್ ಕೂಡ ಈ ಘಟನೆ ಬಗ್ಗೆ ಅಭಿಮಾನಿಗಳಿಗೆ ಬೈದಿದ್ದಾರೆ. ದರ್ಶನ್ ಗೆ ಏನು ಗೊತ್ತೇ ಇಲ್ಲ. ನಾನು ಈ ವಿಚಾರ ಹೇಳಿದ್ದು. ಜಗ್ಗೇಶ್ ಹಿರಿಯರಾಗಿ ಅವರಿಗೆ ಮಾತನಾಡಲು ಹಕ್ಕಿದೆ. ಜಗ್ಗೇಶ್ ಗೆ ಈಗಲು ಹೇಳುತ್ತಿದ್ದೇನೆ. ಇದನ್ನು ಇಲ್ಲಿಗೆ ನಿಲ್ಲಿಸಿದರೆ ಒಳ್ಳೆಯದು ಎಂದರು.
ಯಾರಿಗೆ ಓಟ್ ನೀಡಬೇಕು ಅಂತಾ ಗೊತ್ತಿರಲಿಲ್ಲ….
ಮೈಸೂರು ಮೇಯರ್ ಚುನಾವಣೆಗೆ ಗೈರಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂಎಲ್ ಸಿ ಸಂದೇಶ್ ನಾಗಾರಾಜ್, ನನಗೆ ಮೇಯರ್ ಚುನಾವಣೆ ಗೆ ಅಹ್ವಾನ ನೀಡರಲಿಲ್ಲ. ಯಾರಿಗೆ ಓಟ್ ನೀಡಬೇಕು ಅಂತಾ ಗೊತ್ತಿರಲಿಲ್ಲ. ಈ ಕಾರಣದಿಂದ ನಾನು ಚುನಾವಣೆ ಗೆ ಹೋಗಲಿಲ್ಲ. ಕಳೆದ ದಿನಗಳ ಹಿಂದೆ ಬಿಜೆಪಿಯವರು ಪರಿಷತ್ ನಲ್ಲಿ ಬೆಂಬಲ ನೀಡಿದರು. ಈಗ ಕಾಂಗ್ರೆಸ್ ಗೆ ಮತ ನೀಡಿ ಅಂದ್ರೆ ಅರ್ಥ ಏನು. ಹಾಗಾಗಿ ನಾನು ಚುನಾವಣೆಗೆ ಹೋಗಲಿಲ್ಲ ಎಂದು ಸ್ಪಷ್ಟನೆ ನೀಡಿದರು.
Key words: actor-Jaggesh- statement -not correct – producer- Sandesh Nagaraj.