ಬೆಂಗಳೂರು,ಸೆಪ್ಟಂಬರ್,2,2022(www.justkannada.in): ಇಂದು ಸ್ಯಾಂಡಲ್ ವುಡ್ ನಟ, ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬವಾಗಿದ್ದು ಬರ್ತ್ ಡೇ ದಿನವೇ ಸರ್ಕಾರ ಗಿಫ್ಟ್ ನೀಡಿದೆ.
ಹೌದು ಸರ್ಕಾರದ ಮಹತ್ವಾಕಾಂಕ್ಷಿ ಪುಣ್ಯಕೋಟಿ ಯೋಜನೆಯ ರಾಯಭಾರಿಯಾಗಿ ಕಿಚ್ಚ ಸುದೀಪ್ ಅವರನ್ನು ನೇಮಿಸಲಾಗಿದೆ. ಈ ಕುರಿತು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಘೋಷಣೆ ಮಾಡಿದ್ದಾರೆ.
ಈ ಕುರಿತು ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದಿರುವ ಸಚಿವ ಪ್ರಭು ಚವ್ಹಾಣ್, ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಿ, ಹೈನುಗಾರಿಕೆಗೆ ಉತ್ತೇಜನ ನೀಡಿ, ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಮಾಡುತ್ತಿರುವ ಸರ್ಕಾರದೊಂದಿಗೆ ಕೈಜೋಡಿಸಿ, ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು ತಮ್ಮನ್ನು ತಮ್ಮ ಜನ್ಮದಿನದ ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
Key words: Actor- Kiccha Sudeep -Punyakoti -project -ambassador.
ENGLISH SUMMARY…
Actor Kiccha Sudeep ‘Punyakoti’ program ambassador
Bengaluru, September 2, 2022 (www.justkannada.in): Today is the birthday of Sandalwood’s popular actor Kiccha Sudeep. The State Government has presented him a gift on his birthday. Sudeep has been nominated as the ambassador of the State Govt.’s significant ‘Punyakot’ program. Animal Husbandry Minister Prabhu V. Chawan announced this.
The Minister Prabhu Chawan has written a letter to the actor concerning this. The State Government is making efforts for protection of the livestock by implementing several programs, and to encourage dairy farming, nurturing of livestock. We request you to join hands with our program and encourage in making our program successful. The State Government has nominated you as the ambassador of the ‘Punyakoti’ scheme,” his letter read.
Keywords: Animal Husbandry/ Prabhu Chawan/ Kiccha Sudeep/ ambassador/ Punyakoti program