ಬೆಂಗಳೂರು, ಫೆಬ್ರವರಿ 13, 2020 (www.justkannada.in): ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ಇದೇ ವರ್ಷ ಹಸೆಮಣೆ ಏರಲು ರೆಡಿಯಾಗಿದ್ದಾರೆ.
ಹೌದು. ಸ್ಯಾಂಡಲ್’ವುಡ್’ನ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಇತ್ತೀಚೆಗೆ ಲವ್ ಮಾಕ್ಟೈಲ್ ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು .
ಸದ್ಯ ಲವ್ ಮಾಕ್ಟೈಲ್ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ಈ ಜೋಡಿ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡಿದೆ . ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿರುವ ಕೃಷ್ಣ – ಮಿಲನ ಇದೇ ವರ್ಷ ನಿಶ್ಚಿತಾರ್ಥ ಮಾಡಿಕೊಂಡು ವಿವಾಹ ಆಗಲಿದ್ದಾರಂತೆ.