ಬೆಂಗಳೂರು, ಅಕ್ಟೋಬರ್ 10, 2021 (www.justkannada.in): ಸರಳ ದಸರಾ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ರಂಗಕರ್ಮಿ, ನಟ ಮಂಡ್ಯ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಸರಳ ದಸರಾ ಒಂದು ನೆಪ ಅಷ್ಟೆ. ಖರ್ಚಾಗೊದೆಲ್ಲ ಖರ್ಚು ಆಗ್ತಾ ಇದೆ. ಲೈಟ್ ಗಳೇನು ಕಮ್ಮಿ ಆಗಿಲ್ಲವಲ್ಲ. ಜನ ಏನು ಕಮ್ಮಿ ಆಗಿಲ್ಲವಲ್ಲ. ಅಧಿಕಾರಿಗಳ ಸಂಬಳ ಏನು ಕಡಿಮೆ ಆಗಿಲ್ಲವಲ್ಲ. ಆದ್ರೆ ಸೊಪ್ಪು ಮಾರುವವಳಿಗೆ ಅವಕಾಶ ಕೊಡ್ತಾ ಇಲ್ಲ. ದಸರಾ ಅದ್ದೂರಿಯಾಗಿ, ಚೆನ್ನಾಗೆ ನಡೆಸಬಹುದಿತ್ತು ಎಂದು ಮಂಡ್ಯ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಸರಳ ದಸರಾ ಹೆಸರಿಲ್ಲಿ ಸಂಸ್ಕೃತಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದಕ್ಕ ಬೇಕಾದದ್ದು ದಕ್ಕುತ್ತಿಲ್ಲ. ನಾಟಕಗಳಿಗೆ ಪೋತ್ಸಾಹ ಸಿಗುತ್ತಿಲ್ಲ. ಅರಮನೆ ಮುಂದೆ ನಾಟಕಗಳು ಆಗಬೇಕು. ಅದಕ್ಕೆ ಅವಕಾಶವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾಟಕದಿಂದ ಜಾನಪದಿಂದ ಸಂಸ್ಕೃತಿ ಉಳಿಯಬೇಕು. ಕಲಾವಿದರು ಉಳಿದರೆ ಕಲೆ ಸಂಸ್ಕೃತಿ ಉಳಿಯುವುದು. ಅಧಿಕಾರಿಗಳನ್ನು ಇಟ್ಟುಕೊಂಡು ಮಾತ್ರ ಕಾರ್ಯಕ್ರಮ ಮಾಡುವುದಲ್ಲ. ಹೊಸ ತಲೆಮಾರಿಗೆ ಹಳೆ ತಲಮಾರಿನ ಗಟ್ಟಿತನ ಹೇಳಿಕೊಡಬೇಕು. ಅದನ್ನು ಹೇಳಿಕೊಡುವ ರೀತಿ ತಪ್ಪಾಗಿದೆ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.
key words: actor mandya ramesh talk about simple dasara