ಬೆಂಗಳೂರು, ಜನವರಿ 13, 2020 (www.justkannada.in): ಸ್ಟಾರ್ ಜೋಡಿ ನಟಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ತಮ್ಮ ಮದುವೆ ಆಹ್ವಾನ ಪತ್ರಿಕೆ ಹಂಚುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಪ್ರೇಮಿಗಳ ದಿನದಂದು ಹಸೆಮಣೆ ಏರಲು ನಿರ್ಧರಿಸಿರುವ ಈ ಪ್ರೇಮಿಗಳು ಚಿತ್ರರಂಗದ ಗಣ್ಯರು ಸೇರಿದಂತೆ ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ಹಂಚುವುದರಲ್ಲಿ ನಿರತರಾಗಿದ್ದಾರೆ.
ಈಗಾಗಲೇ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಾದ ಸುದೀಪ್, ನಮಿತಾ ರತ್ನಾಕರ್, ಅಮೂಲ್ಯಾ ಸೇರಿದಂತೆ ಹಲವರಿಗೆ ಲಗ್ನಪತ್ರಿಕೆ ತಲುಪಿಸಿದ್ದಾರೆ.
ಲವ್ ಮಾಕ್ಟೇಲ್-2 ಬಳಿಕ ಮದುವೆಯಾಗುವುದಾಗಿ ತಿಳಿಸಿದ್ದ ಈ ಜೋಡಿ ಫೆ. 14ರಂದು ಹೊಸ ಜೀವನ ಶುರು ಮಾಡಲಿದೆ.