ಚಾಮರಾಜನಗರ,ಮಾ,8,2020(www.justkannada.in): ಚಾಮರಾಜನಗರ ಜಿಲ್ಲೆ ಅಭಿವೃದ್ದಿರಾಯಭಾರಿಯಾಗಿ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ಆಯ್ಕೆ ಮಾಡಲಾಗಿದೆ
ಈ ಬಗ್ಗೆ ಮಾತನಾಡಿರುವ ಚಾಮರಾನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ನನ್ನ ಉಸ್ತುವಾರಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲಿ ನೈಸರ್ಗಿಕ ಸಂಪತ್ತು ಅಪಾರ ಪ್ರಮಾಣದಲ್ಲಿದೆ. ಜೊತೆಗೆ ಮಲೆ ಮಾದೇಶ್ವರ ಬೆಟ್ಟ, ಬಿಳಿಗಿರಂಗನ ಬೆಟ್ಟ, ಹಿಮವದ್ ಗೋಪಾಲಕೃಷ್ಣ ಬೆಟ್ಟ ಗಳಂತಹ ಭಕ್ತಾದಿಗಳನ್ನು, ಪ್ರವಾಸಿಗಳನ್ನು ಸೆಳೆಯುವ ಕ್ಷೇತ್ರಗಳಿವೆ. ಭರಚುಕ್ಕಿಯೂ ಇದೆ. ಆದರೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯೂ ಇದೆ. ಈ ಹಣೆಪಟ್ಟಿಯನ್ನು ತೆಗೆದುಹಾಕುವುದು ನಮ್ಮ ಕರ್ತವ್ಯ. ಈ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ನನ್ನೊಡನೆ ಒಂದಷ್ಟು ಅಭಿವೃದ್ಧಿಪೂರಕ ಕಾರ್ಯಕ್ರಮಗಳ ಕುರಿತು ಚರ್ಚಿಸಿದ್ದಾರೆ. ಜಾಗೃತಿ ಅಂದೋಲನದ ಅಗತ್ಯತೆ ಕುರಿತೂ ಮಾತನಾಡಿದ್ದಾರೆ.
ಇವೆಲ್ಲದಕ್ಕೆ ಓರ್ವ ಅಭಿವೃದ್ದಿಯ ರಾಯಭಾರಿ Brand Ambassador ಅಗತ್ಯವಿದೆ. ವರನಟ ಡಾ.ರಾಜ್ ಕುಮಾರ್ ರವರ ಜಿಲ್ಲೆ ನಮ್ಮ ಚಾಮರಾಜನಗರ ಜಿಲ್ಲೆ. ಈ ಹಿನ್ನೆಲೆಯಲ್ಲಿ ಇಂದು ನಾಡಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಅವರು ನಮ್ಮ ಜಿಲ್ಲೆಯ ಅಭಿವೃದ್ಧಿ ರಾಯಭಾರಿ ಆಗಬೇಕೆನ್ನುವ ಅಭಿಲಾಶೆ ವ್ಯಕ್ತಪಡಿಸಿದೆವು. ಅವರು ಸಂತಸದಿಂದ ನಮ್ಮ ಮನವಿಯನ್ನು ಪುರಸ್ಕರಿಸಿದ್ದಾರೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿ ಕಾಣಬೇಕೆಂಬುದು ಒಂದಂಶದ ಆಕಾಂಕ್ಷೆ. ಪುನೀತ್ ರಾಜ್ ಕುಮಾರ್ ರವರಿಗೆ ನಮ್ಮ ಜಿಲ್ಲೆಯ ಪರವಾಗಿ, ರಾಜ್ಯ ಸರ್ಕಾರದ ಪರವಾಗಿ ಧನ್ಯವಾದಗಳನ್ನ ಅರ್ಪಿಸುತ್ತೇನೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
Key words: Actor- Power Star Puneet Raj Kumar – development- ambassador -Chamarajanagar district.