ಬೆಂಗಳೂರು, ಜೂನ್ 11, 2022 (www.justkannada.in): ಬಾಹುಬಲಿ ಹೀರೋ ಪ್ರಭಾಸ್ ಕೊನೆಗೂ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಸುದ್ದಿ ಹೊರಬಿದ್ದಿದೆ.
ಹೌದು. ಪ್ರಭಾಸ್ ಕುಟುಂಬದ ಮೂಲಗಳ ಪ್ರಕಾರ ಪ್ರಭಾಸ್ ಮದುವೆಗೆ ಒಪ್ಪಿಗೆ ನೀಡಿದ್ದು, ಸದ್ಯದಲ್ಲಿಯೇ ಬಾಹುಬಲಿ ಹಸೆಮಣೆ ಏರಲಿದ್ದಾರೆ.
ಈಗಾಗಲೇ ಪ್ರಭಾಸ್ ಪೋಷಕರು ಅವರಿಗಾಗಿ ಹುಡುಗಿ ನೋಡಿದ್ದು, ಮನೆಯವರು ನೋಡಿದ ಹುಡುಗಿಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಹುಡುಗಿ ಸಿನಿಮಾ ರಂಗಕ್ಕೆ ಸಂಬಂಧ ಇಲ್ಲ ಎನ್ನಲಾಗಿದೆ. ಈ ಮೂಲಕ ಪ್ರಭಾಸ್ ಮದುವೆಯ ಬಗ್ಗೆ ಇದ್ದ ಊಹಾ ಪೋಹಾಗಳಿಗೆ ತೆರೆ ಬಿದ್ದಿದೆ.
ಈ ಮೊದಲು ಹಲವಾರು ಬೇರೆ ಬೇರೆ ನಟಿಯರ ಜೊತೆ ಪ್ರಭಾಸ್ ಹೆಸರು ಕೇಳಿ ಬಂದಿತ್ತು. ಅವರ ಜೊತೆ ಮದುವೆ, ಇವರ ಜೊತೆ ಮದುವೆ ಎಂದೆಲ್ಲಾ ಸುದ್ದಿ ಹರಿದಾಡಿತ್ತು.