ಮೈಸೂರು,ಅಕ್ಟೋಬರ್,30,2021(www.justkannada.in): ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರಿನ ಶಕ್ತಿಧಾಮದಲ್ಲಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೈಸೂರಿನ ಶಕ್ತಿಧಾಮ ಆಶ್ರಿತ ಹೆಣ್ಣು ಮಕ್ಕಳು ನಟ ಪುನೀತ್ ರಾಜ್ ಕುಮಾರ್ ಗೆ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಗೊಂಬೆ ಹೇಳುತೈತೆ..ಮತ್ತೆ ಹೇಳುತೈತೆ…ನೀನೆ ರಾಜಕುಮಾರ ಎಂದು ಸಾಮೂಹಿಕವಾಗಿ ಹಾಡು ಹೇಳಿ ಮಕ್ಕಳು ಶ್ರದ್ದಾಂಜಲಿ ಅರ್ಪಿಸಿದರು.
ನಟ ಅಪ್ಪು ಅವರು ಶಕ್ತಿಧಾಮಕ್ಕೆ ತಮ್ಮ ಬದುಕಿನ ಉದ್ದಕ್ಕೂ ನೆರವಾಗಿದ್ದರು. ಡಾ.ಪಾರ್ವತಮ್ಮ ರಾಜ್ ಕುಮಾರ್ ಶಕ್ತಿಧಾಮದ ಸ್ಥಾಪಕ ಅಧ್ಯಕ್ಷರಾಗಿದ್ದು, ತಾಯಿಯ ಆಶಯದಂತೆ ನಟ ಪುನೀತ್ ರಾಜ್ ಕುಮಾರ್ ಶಕ್ತಿಧಾಮಕ್ಕೆ ಬಂದು ಹೋಗುತ್ತಿದ್ದರು. ಇದೀಗ ಯುವರತ್ನನ ಅಗಲಿಕೆಯಿಂದ ಶಕ್ತಿಧಾಮದ ಮಕ್ಕಳು ಅತೀವ ದು:ಖಿತರಾಗಿದ್ದು ನಿನ್ನೆ ಇಡೀ ಊಟ ಮಾಡದೆ ಉಪವಾಸವಿದ್ದರು ಎನ್ನಲಾಗಿದೆ.
ನಟ ಪುನೀತ್ ಅಗಲಿಕೆಯಿಂದ ಭಾವುಕರಾಗಿ ಮಾತನಾಡಿದ ಶಕ್ತಿಧಾಮದ ಸಂಚಾಲಕ ಜಿ.ಎಸ್. ಜಯದೇವ್, ಪುನೀತ್ ರಾಜ್ ಕುಮಾರ್ ಶಕ್ತಿಧಾಮಕ್ಕೆ ಬೆನ್ನೆಲುಬುದಾಗಿದ್ದರು. ಶಕ್ತಿಧಾಮ ಡಾ. ರಾಜ್ ಕುಟುಂಬದ ಕನಸು. ಅನಾಥ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರ. ಪುನೀತ್ ಅವರು ಶಕ್ತಿಧಾಮಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದರು.
ಕಳೆದ ವರ್ಷ ಕನ್ನಡದ ಕೋಟ್ಯಾಧಿಪತಿಯಿಂದ ತಮಗೆ ಬಂದಿದ್ದ 18 ಲಕ್ಷ ರೂ. ಸಂಭಾವನೆಯನ್ನು ಶಕ್ತಿಧಾಮಕ್ಕೆ ನೀಡಿದ್ದರು. ಪ್ರತೀ ವರ್ಷ ಮಕ್ಕಳಿಗೆ ಪುಸ್ತಕ ಹಾಗೂ ಇತರ ಅಗತ್ಯತೆಗಳನ್ನು ಪೂರೈಸುತ್ತಾ ಬಂದಿದ್ದರು. ಶಕ್ತಿಧಾಮಕ್ಕೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ದೊಡ್ಡ ಶಿಕ್ಷಣ ಸಂಸ್ಥೆ ಆರಂಭಿಸಲು ಯೋಚಿಸಿದ್ದರು. ಸುಮಾರು 8 ಕೋಟಿ ವೆಚ್ಷದ ಅಂದಾಜು ಕೂಡ ಮಾಡಿಸಿದ್ದರು.
ಈ ವರ್ಷ ಕೋವಿಡ್ ಗೆ ಮುನ್ನ ಶಕ್ತಿಧಾಮಕ್ಕೆ ಬಂದು ಬಹಳ ಹೊತ್ತು ಮಕ್ಕಳೊಂದಿಗೆ ಸಮಯ ಕಳೆದಿದ್ರು. ಇತ್ತೀಚಿನ ದಿನಗಳಲ್ಲಿ ಪುನೀತ್ ಶಿಕ್ಷಣದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಶಕ್ತಿಧಾಮಕ್ಕೆ ಬಂದು ಮಕ್ಕಳ ಜೊತೆ ಊಟ ಮಾಡೋದಂದ್ರೆ ಅವರಿಗೆ ಬಲು ಇಷ್ಟ. ಮಕ್ಕಳಿಗೆ ಒಳ್ಳೆಯ ಕಡೆ ಊಟ ತರಿಸಿ ಅವರೂ ಊಟ ಮಾಡುತ್ತಿದ್ದರು. ಶಿವಣ್ಣ ಅವರೂ ಕೂಡ ಪುನೀತ್ ಅವರ ಯೋಜನೆಗಳಿಗೆ ಕೈಜೋಡಿಸಿದ್ದರು.ಶಕ್ತಿಧಾಮದ ಸಲುವಾಗಿ ವಿದೇಶಕ್ಕೆ ಹೋಗಿ ಬರಲು ತಯಾರಿ ಮಾಡುತ್ತಿದ್ದರು. ಕನ್ನಡದ ಬೇರೆ ಬೇರೆ ನಟ ಸಹಕಾರ ಪಡೆದು ಶಕ್ತಿಧಾಮಕ್ಕೆ ನೆರವಾಗಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ರು. ಪುನೀತ್ ರ ಅಗಲಿಕೆ ಶಕ್ತಿಧಾಮ ಹಾಗೂ ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಸ್ಮರಿಸಿದರು.
Key words: Actor -Puneeth Raj Kumar – devoted -fan – Mysore-shakthidama
ENGLISH SUMMARY…
Emotional Obeisance to Puneeth Rajkumar at Shaktidhama in Mysuru
Mysuru, October 30, 2021 (www.justkannada.in): The inmates of Shaktidhama Orphanage and Oldage home in Mysuru paid an emotional obeisance to actor Puneeth Rajkumar who died of cardiac arrest in Bengaluru yesterday.
The girl children inmates of Shaktidhama paid an emotional obeisance to the actor by singing a popular Kannada film song ‘Bombe Helutaite… Matte Helutaite…’ from Puneeth’s blockbuster movie ‘Rajakumaara.’
Puneeth Rajkumar was the main patron of Shaktidhaama, which was established by his mother the late Parvathamma Rajkumar. He supported the old age home throughout his life as per the wish of his late mother.
Shaktidhaama’s Convener G.S. Jayadev in his message stated that Puneeth was the backbone of the NGO. “Shaktidhaama is the dream of Dr. Rajkumar, which provides shelter to orphaned girl children. Puneeth had completely involved himself in supporting the activities of the rehabilitation center.”
He also informed that Puneeth Rajkumar donated the entire Rs.18 lakh which he earned through the ‘Kannadada Kotyadhipati’ to Shaktidhaama. He also used to support by providing books and other necessities to the inmates every year. The Shaktidhaama is spread across three acres of land. Puneeth had plans to start an educational institution at an estimated cost of Rs. 8 crores.
Puneeth had also visited Shaktidhaama before the onset of the COVID-19 Pandemic and had spent time with the children. “Puneeth Rajkumar had developed an interest towards the education of late. He used to like to have food with the children here. Actor Shivarajkumar, who is also the brother of Puneeth also had joined hands in this cause,” he added.
Keywords: Shaktidhaama/ Rehabilitation Center/ Mysuru/ NGO/ emotional obeisance