ನಟ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಚಿನ್ನದ ಪದಕ ಘೋಷಣೆ

ಮೈಸೂರು,ಮಾರ್ಚ್,7,2025 (www.justkannada.in): ಮುಂದಿನ ದಿನಗಳಲ್ಲಿ ತಾಂತ್ರಿಕ ವಿಶ್ವ ವಿದ್ಯಾಲಯಗಳಲ್ಲಿ ಯಾವುದೇ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಟ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಚಿನ್ನದ ಪದಕ ನೀಡಲಾಗುವುದು ಎಂದು ಎಂಐಟಿ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಡಾ.ಎಂ. ಹೇಮಂತ್ ಕುಮಾರ್ ಘೋಷಣೆ ಮಾಡಿದರು.

ನಂಜನಗೂಡು ತಾಲ್ಲೂಕಿನ ತಾಂಡವಪುರದಲ್ಲಿರುವ ಎಂಐಟಿ ಇಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ಆಯೋಜನೆ ಮಾಡಿದ್ದ 2 ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಪುನೀತ್ ರಾಜಕುಮಾರ್ ಅವರ ಗುಣ ಮತ್ತು ಸಾಧನೆ ಆವರು ಮಾಡಿದ ಸಹಾಯವನ್ನು ಎಲ್ಲರೂ ಮೆಚ್ಚುವಂತದ್ದು, ಯುವ ಜನಾಂಗಕ್ಕೆ ಪುನೀತ್ ರಾಜಕುಮಾ‌ರ್ ಅವರು ಸ್ಪೂರ್ತಿ. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ತಾಂತ್ರಿಕ ವಿಶ್ವವಿದ್ಯಾ ನಿಲಯಗಳಲ್ಲಿ ಯಾವುದೇ ವಿಭಾಗದಲ್ಲಾದರೂ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದರೆ ಅವರಿಗೆ ಪುನೀತ್ ರಾಜಕುಮಾ‌ರ್ ಹೆಸರಿನಲ್ಲಿ ಚಿನ್ನದ ಪದಕವನ್ನು ನೀಡಲಾಗುವುದು ಎಂದು ಘೋಷಿಸಿದರು.

ಮಹಾರಾಜ ತಾಂತ್ರಿಕ ವಿಶ್ವವಿದ್ಯಾನಿಲಯ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಕನಸಿಗೆ ನೀರೆರೆಯುತ್ತದೆ.  ಅವರು ಜೀವನದಲ್ಲಿ ಏನಾದರೂ ಸಾಧಿಸಬೇಕಾದರೇ ಅವರಿಗೆ ಬೆನ್ನೆಲುಬಾಗಿ ನಮ್ಮ ಮಹಾರಾಜ ಎಜುಕೇಶನ್ ಟ್ರಸ್ಟ್ ನಿಲ್ಲುತ್ತದೆ ಎಂದು ತಿಳಿಸಿದರು.

ಕಾಲೇಜು ಪ್ರಾಂಶುಪಾಲ ವೈಟಿ ಕೃಷ್ಣಗೌಡರು ಮಾತನಾಡಿ,  ನಾನು ಕೂಡ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದೇನೆ ಅವರನ್ನು ಚಿಕ್ಕಮಗುವಿನಿಂದ ಅವರ ಸ್ವಭಾವವನ್ನು ಗಮನಿಸಿದ್ದೇನೆ ಅವರ ನಟನೆ ಮತ್ತು ಅವರ ಗುಣಗಳು ಚಿಕ್ಕ ಮಗುವಿನಿಂದ ಎಂಬತ್ತರ ವಯೋವೃದ್ಧರವರೆಗೆ ಇಷ್ಟಪಡುವ ನಡತೆಯಾಗಿದೆ. ಉತ್ತಮ ನಟರು ಕೂಡ ಹೌದು ಎಂದರು.  ಅಶ್ವಿನಿ ಅವರು ದೊಡ್ಡಮನೆ ಸೊಸೆಯಾಗಿ ಉತ್ತಮ ಜವಾಬ್ದಾರಿ ಯನ್ನು ನಿಭಾಯಿಸುತ್ತಿದ್ದಾರೆ ಆ ಮನೆಗೆ ಗೌರವ ತಂದುಕೊಟ್ಟಿದ್ದಾರೆ ಎಂದು ನುಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಮುಖ್ಯ ವಿಶೇಷ ಆಹ್ವಾನಿತರಾಗಿ ಜೋಲಿ ಬಿಸಿಲ್, ಕನ್ನಡ ಪಾಧ್ಯಾಪಕರಾದ ಗಣೇಶ್, ಜಂಟಿ ಕಾರ್ಯದರ್ಶಿ ಡಾ. ಎಚ್ ಕೆ ಚೇತನ್, ನಿರ್ದೆಶಕ ಡಾ. ರಂಜಿತ್ ಕೆ ಎಸ್. ಪ್ರೊಫೆಸರ್ ಮಹಮ್ಮದ್ ಸಲಾಮತ್, ಎಚ್ ಓ ಡಿ ಡಾ. ಬಿ.ಸಿ.ನಾಗೇಂದ್ರ ಕುಮಾರ್, ನವೀನ್, ಮನು ಎಸ್ ಗೌಡ ಕುಮಾರಿ ಚಂದನ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಂದ ಉಪಸ್ಥಿತರಿದ್ದರು.

 

Key words: Gold medal, announced, name, actor Puneeth Rajkumar, mysore