ಬೆಂಗಳೂರು, ನವೆಂಬರ್ 14, 2020 (www.justkannada.in): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಕ್ಕಳ ದಿನಾಚರಣೆಗೆ ವಿಶಿಷ್ಟವಾಗಿ ವಿಶ್ ಮಾಡಿದ್ದಾರೆ.
ಹೌದು. ವಿದೇಶದ ಪುಟಾಣಿಯೊಂದು ತಮ್ಮ ಸಿನಿಮಾದ ಹಾಡುಗಳನ್ನು ಹಾಡುವ ವಿಡಿಯೋಗಳನ್ನು ಅಪ್ಪು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ವಿದೇಶೀ ಮಗುವೊಂದು ಕಣ್ಣಿಗೆ ಕಾಣುವ ದೇವರು ಎಂದರೆ ಹಾಡನ್ನು ಹಾಡುವ ವಿಡಿಯೋ ಹಾಗೂ ಇಬ್ಬರು ಭಾರತೀಯ ಕುಡಿಗಳು ಬಾನ ದಾರಿಯಲ್ಲಿ ಹಾಡುವ ವಿಡಿಯೋವನ್ನು ಹಂಚಿಕೊಂಡು ಮಕ್ಕಳ ದಿನಾಚರಣೆ ಶುಭ ಕೋರಿದ್ದಾರೆ.